

ಹಾವೇರಿ: ನಗರದ ಎಸ್‌ಸಿ, ಎಸ್ಟಿ ಪ್ರಥಮ ದರ್ಜೆ ಕಾಲೇಜ್‌ನ ಕೊಠಡಿವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ದಾಖಲಾತಿಗಳು ಸುಟ್ಟು ಹೋದ ಘಟನೆ ಭಾನುವಾರ ಸಂಭವಿಸಿದೆ.
ಕೊಠಡಿಯಲ್ಲಿ ಹಳೆಯ ವಿದ್ಯಾರ್ಥಿಗಳ ಅಸೈನಮೆಂಟ್ ಪುಸ್ತಕ ಸೇರಿ ಇತರ ದಾಖಲಾತಿಗಳನ್ನು ಇಡಲಾಗಿತ್ತು. ಆಕಸ್ಮಿಕವಾಗಿ ಬೆಂಕಿ ತಗುಲಿದ ಕಾರಣ ಅವುಗಳು ಸುಟ್ಟು ಕರಕಲಾಗಿವೆ. ಜತೆಗೆ ಖುರ್ಚಿ, ಟೇಬಲ್ ಸುಟ್ಟು ಹೋಗಿವೆ. ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.