ಅಗ್ನಿಕುಂಡ ಹಾಯುವಾಗ ಬಿದ್ದು ಗಾಯಗೊಂಡ ಅರ್ಚಕಿ!

priest F
Published on

ಬೆಂಗಳೂರು ಗ್ರಾಮಾಂತರ: ಅಗ್ನಿಕುಂಡ ಹಾಯುವ ವೇಳೆ ಬಿದ್ದು ಅರ್ಚಕಿಯೊಬ್ಬರು ಗಾಯಗೊಂಡಿರುವ ಪ್ರಕರಣ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ನಡೆದಿದೆ.

ಅಜ್ಜನಕಟ್ಟೆ ರೇಣುಕಾ ಯಲ್ಲಮ್ಮ ಅಗ್ನಿಕೊಂಡ ಸೇವೆಯ ವೇಳೆ ಅವಘಡ ಸಂಭವಿಸಿದ್ದು, ರೇಣುಕಾ ಯಲ್ಲಮ್ಮ ದೇವಸ್ಥಾನದ ಅನು ಜೋಗತಿಯಮ್ಮ ಗಾಯಗೊಂಡಿದ್ದಾರೆ.

ಸೋಮವಾರ ರಾತ್ರಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಅಗ್ನಿಕೊಂಡ ಸೇವೆ ನಡೆಯುತ್ತಿತ್ತು. ಈ ವೇಳೆ ಕಳಶ ಹೊತ್ತಿದ್ದ ಅನು ಜೋಗತಿಯಮ್ಮ ಅಗ್ನಿಕೊಂಡ ಪ್ರವೇಶಿಸಿದರು. ಈ ವೇಳೆ ಅವಘಡ ನಡೆದಿದೆ. ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದು ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net