ದೇವರಿಗೆ ಹಚ್ಚಿದ ದೀಪದಿಂದ 2 ಮನೆ ಭಸ್ಮ

Fire Accident at Soraba Shivamogga 10 JAN 20
Published on

ಸೊರಬ: ತಾಲೂಕಿನ ಕುಬಟೂರು ಗ್ರಾಮದಲ್ಲಿ ಶುಕ್ರವಾರ ದೇವರಿಗೆ ಹಚ್ಚಿದ ದೀಪ ತಗುಲಿ ಎರಡು ಮನೆಗಳು ಸುಟ್ಟು ಕರುಕಲಾಗಿವೆ.

ಕುಬಟೂರು ಗ್ರಾಮದ ಎಸ್​ಸಿ ಕಾಲನಿಯ ಮಂಜಮ್ಮ ಅವರ ಹುಲ್ಲಿನ ಮನೆಯಲ್ಲಿ ಗುರುವಾರ ರಾತ್ರಿ ದೇವರಿಗೆ ಹಚ್ಚಿದ ದೀಪ ಮುಂಜಾನೆ 3 ಗಂಟೆ ಸಮಯದಲ್ಲಿ ಮನೆಗೆ ಹತ್ತಿದ ಪರಿಣಾಮ ಮನೆ ಸಂಪೂರ್ಣ ಸುಟ್ಟು ಹೋಗಿದೆ. ಈ ಮನೆಯ ಬೆಂಕಿಯಿಂದ ಪಕ್ಕದ ಬಸವರಾಜ್ ಎಂಬುವರ ಮನೆಯಲ್ಲಿನ ಅಡುಗೆ ಅನಿಲ ಲೀಕೆಜ್ ಆಗಿ ಬೆಂಕಿ ಹತ್ತಿಕೊಂಡು ಅವರ ತಗಡಿನ ಮನೆ ಸಂಪೂರ್ಣ ಸುಟ್ಟು ಹೋಗಿದೆ.

ಬಸವರಾಜ್ ಅವರ ಮನೆಯಲ್ಲಿದ್ದ ಚಿನ್ನದ ಸರ, ಚಿನ್ನದ ಬಳೆ, ಉಂಗುರ, ಅಡುಗೆ ಸಾಮಗ್ರಿಗಳು ಹಾಗೂ ಪೀಠೋಪಕರಣಗಳು ಸೇರಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಮಂಜಮ್ಮ ಮತ್ತು ಅವರ ಮಗ ಪಕ್ಕದ ಕೇರಿಯಲ್ಲಿ ನಡೆಯುವ ದೇವರ ಉತ್ಸವಕ್ಕೆ ಹೋಗಿದ್ದು ಬಸವರಾಜ್ ಮತ್ತು ಅವರ ಕುಟುಂಬ ಕೆಲಸಕಾಗಿ ಚಿಕ್ಕಮಗಳೂರಿಗೆ ಹೋದ ಪರಿಣಾಮ ಎರಡೂ ಮನೆಯಲ್ಲಿ ಯಾರೂ ಇರಲಿಲ್ಲ. ಘಟನಾ ಸ್ಥಳಕೆ ಸೊರಬ ಅಗ್ನಿ ಶಾಮಕದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net