ಬೆಂಕಿ ಆಹುತಿಯಾದ ಹುಲ್ಲಿನ ಮೆದೆ

17-02--krs1 (1)
Published on

ಕೆ.ಆರ್.ಸಾಗರ : ಕೆ.ಆರ್.ಸಾಗರ ಬಜಾರ್ ಲೈನ್ ನಿವಾಸಿ ಬಸವರಾಜು ರವರ ಪತ್ನಿ ಲಲಿತಾ ಎಂಬವರಿಗೆ ಸೇರಿದ ಹುಲ್ಲಿನ ಮೆದೆ ಶುಕ್ರವಾರ ಸಂಜೆ ಬೆಂಕಿಗೆ ಅಹುತಿಯಾಗಿದೆ. ಹಸು ಮತ್ತು ಎತ್ತುಗಳ ಮೇವಿಗೆಂದು ವರುಣಾ ಕಾಲುವೆ ಏರಿಯ ಬಳಿ ಮೆದೆ ಹಾಕಿದ್ದ ಹುಲ್ಲಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದರಿಂದ ಕೆಲವೇ ನಿಮಿಷದಲ್ಲಿ ಭಸ್ಮವಾಗಿದೆ. ಸಮೀಪದಲ್ಲೇ ಇದ್ದ ಎತ್ತಿನ ಗಾಡಿ ಚಕ್ರಕ್ಕೂ ಬೆಂಕಿ ತಗುಲಿ ಹಾನಿಯಾಗಿದೆ.
ಲಲಿತಾ ನೀಡಿದ ದೂರಿನ ಮೇರೆಗೆ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net