ಕೊಟ್ಟಿಗೆ ಬೆಂಕಿಗೆ ಯುವಕ ಬಲಿ

Published on

ತ್ಯಾಮಗೊಂಡ್ಲು: ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ತಗುಲಿದ ವೇಳೆ ಕೊಟ್ಟಿಗೆಯಲ್ಲಿದ್ದ ಹಸು ರಕ್ಷಣೆಗೆ ಮುಂದಾದ ಯುವಕ ಬೆಂಕಿ ಕೆನ್ನಾಲಿಗೆ ಸಿಲುಕಿ ಮೃತಪಟ್ಟ ಪ್ರಕರಣ ತ್ಯಾಮಗೊಂಡ್ಲು ಹೋಬಳಿಯ ತಾವರೆಕೆರೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಲೋಕೇಶ್(24) ಮೃತ. ಮನೆಯ ನೀರು ಕಾಯಿಸುವ ಒಲೆಯಿಂದ ವ್ಯಾಪಿಸಿದ ಬೆಂಕಿ ಕೊಟ್ಟಿಗೆ ಸೇರಿ ಪಕ್ಕದಲ್ಲೇ ಇದ್ದ ರಾಗಿ ಹುಲ್ಲಿನ ಮೆದೆಗೆ ವ್ಯಾಪಿಸಿದೆ.

ಕೊಟ್ಟಿಗೆಗೆ ನುಗ್ಗಿದ ಲೋಕೇಶ್ ಹಸುಗಳನ್ನು ಎಳೆದು ಹೊರ ತಂದಿದ್ದಾರೆ. ಈ ವೇಳೆ ನಾಲ್ಕು ಹಸುಗಳು ಗಂಭೀರವಾಗಿ ಗಾಯಗೊಂಡಿವೆ. ಕೊಟ್ಟಿಗೆಗೆ ಹೊದಿಸಿದ್ದ ಟಾರ್ಪಾಲ್ ಮೇಲೆ ಬಿದ್ದು

ಶೇ.90 ದೇಹ ಸುಟ್ಟು ಹೋಗಿತ್ತು. ಗಾಯಾಳುವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಲೋಕೇಶ್ ಮೃತಪಟ್ಟಿದ್ದಾರೆ.

ತ್ಯಾಮಗೊಂಡ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net