ಡೆತ್ ನೋಟ್ ಆಧರಿಸಿ ಎಫ್ ಐ ಆರ್ ದಾಖಲು, ಕಾಂಗ್ರೆಸ್ ಗೊಂದು ನ್ಯಾಯ? ನಮಗೊಂದು ನ್ಯಾಯವೇ? ಎಂದು‌ ಪ್ರಶ್ನಿಸಿದ ಬಿಜೆಪಿ

7cbp1bjpressemeet-1.jpg
Published on

ಜಿ.ಪಂ.ಸಿಇಒ ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕರು ರಾಜಕೀಯ ದುರುದ್ದೇಶದಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಸಂಸದ ಡಾ ಕೆ.ಸುಧಾಕರ್‌ ಹೆಸರನ್ನು ಸೇರಿಸಲು ಹುನ್ನಾರ ನಡೆಸಿರುವುದು ಖಂಡನೀಯ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಕರಣದ ಪಾರದರ್ಶಕ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ, ಇದರಲ್ಲಿ ರಾಜಕೀಯ ಬೆರೆಸಬಾರದು. ಮೃತನ ಡೆತ್‌ ನೋಟ್‌ ನಲ್ಲಿ ಎಲ್ಲೂ ಸಂಸದ ಡಾ ಕೆ.ಸುಧಾಕರ್‌ ನೇರವಾಗಿ ಹಣ ಪಡೆದಿರುವ ಆರೋಪ ಇಲ್ಲ. ಬಾಬು ಹಾಗೂ ಮಧ್ಯವರ್ತಿಗಳ ವ್ಯವಹಾರದಲ್ಲೂ ಭಾಗಿಯಾಗಿಲ್ಲ ಎಂದು ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಕೋಚಿಮುಲ್‌ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್‌ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ ಮಾತನಾಡಿ, ಕೊಡುಗು, ಕಲ್ಬುರ್ಗಿ ಜಿಲ್ಲೆಯಲ್ಲಿ ವರದಿಯಾಗಿದ್ದ ಆತ್ಮಹತ್ಯೆ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಡೆತ್‌ ನೋಟ್‌ ನಲ್ಲಿ  ಕಾಂಗ್ರೆಸ್‌ ಶಾಸಕ ಪೊನ್ನಣ್ಣ ಸೇರಿದಂತೆ ಕಾಂಗ್ರೆಸ್ ನಾಯಕರ ಹೆಸರಿದ್ದರೂ ಎಫ್‌ ಐ ಆರ್‌ ನಲ್ಲಿ ನಮೂದಿಸಲಿಲ್ಲ. ಆದರೆ, ಇಲ್ಲಿನ ಪ್ರಕರಣದಲ್ಲಿ ಮಾತ್ರ ಸುಧಾಕರ್‌ ಹೆಸರು ಸೇರಿಸಲು ಕಾಂಗ್ರೆಸ್‌ ನಾಯಕರು ಒತ್ತಡ ಹೇರಿದ್ದಾರೆ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯವೇ? ಎಂದು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಎ.ಗಜೇಂದ್ರ, ಸದಸ್ಯ ಸತೀಶ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಆವಲಕೊಂಡರಾಯಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎ.ವಿ.ಭೈರೇಗೌಡ ಮತ್ತಿತರರು ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net