ಜಾಧವ್ ಸೇರಿ ಆರು ಜನರ ವಿರುದ್ಧ ಕೇಸ್

Dr Umesh Jadhav
Published on

ಕಲಬುರಗಿ: ನಗರದ ಸಾರ್ವಜನಿಕ ಉದ್ಯಾನ ಸಮೀಪದಲ್ಲಿ ಅನುಮತಿ ಇಲ್ಲದೆ ಕುರುಬರ ಬಹಿರಂಗ ಸಮಾವೇಶ ನಡೆಸಿದ ಆರೋಪದಡಿ ಸಂಸದ ಡಾ.ಉಮೇಶ ಜಾಧವ ಸೇರಿ ಆರು ಜನರ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಸದ ಜಾಧವ್, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಸಂಘದ ಅಧ್ಯP್ಷÀ ಪರಮೇಶ ಆಲಗೂಡ, ಜಿಪಂ ಮಾಜಿ ಸದಸ್ಯ ದಿಲೀಪ ಪಾಟೀಲ್, ಸತೀಶ, ಬಸವರಾಜ ಮದ್ದರಕಿ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಕಮಲಾಪುರದ ಲಾಡ ಮುಗಳಿಯ ಯುವಕ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಮೇ ೫ರಂದು ಸ್ವಾಭಿಮಾನಿ ಕುರುಬರ ಬಹಿರಂಗ ಸಮಾವೇಶ ನಡೆಸಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘದ ಜಿಲ್ಲಾ ಶಾಖೆ ಸಹಾಯಕ ಚುನಾವಣೆ ಅಧಿಕಾರಿಗೆ ಮನವಿ ಸಲ್ಲಿಸಿತ್ತು. ಆದರೆ, ಸಭೆ ನಡೆಸಲು ಅನುಮತಿ ನೀಡಿರಲಿಲ್ಲ ಎಂದು ಪೊಲೀಸರು ತಿಳಿಸಿz್ದÁರೆ. ಆದರೂ ನೂರಾರು ಜನರನ್ನು ಒಗ್ಗೂಡಿಸಿ ಸಮಾವೇಶ ಮಾಡಿ, ಜಗತ್ ವೃತ್ತಕ್ಕೆ ತೆರಳಿ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net