ಬೆದರಿಕೆ ಹಾಕಿದ್ದ ಇಬ್ಬರ ವಿರುದ್ಧ ಎಫ್‌ಐಆರ್

FIR-2
Published on

ಮೈಸೂರು: ಕಾಲ್ ರೆಕಾರ್ಡ್ ಮತ್ತು ಫೋಟೋಗಳನ್ನು ಕುಟುಂಬದವರಿಗೆ ಕಳುಹಿಸಿ ಗೌರವಕ್ಕೆ ಧಕ್ಕೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಇಬ್ಬರ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.


ಕೊಯಮತ್ತೂರಿನ ಉಮಾಪತಿ ಮತ್ತು ಅರವಿಂದನಗರದ ನಿವಾಸಿ ಶೀಲಾ ಗೋಪಾಲ್ ವಿರುದ್ಧ ಪ್ರಕರಣ ದಾಖಲಾಗಿದೆ.


ಉಮಾಪತಿ ನಮ್ಮ ಕುಟುಂಬದ ದೂರದ ಸಂಬಂಧಿಯಾಗಿದ್ದು, ನಮ್ಮ ತಾಯಿ ಮೊಬೈಲ್‌ನಲ್ಲಿ ಮಾತನಾಡಿರುವ ವಾಯ್ಸ ರೇಕಾರ್ಡಿಂಗ್ ಮತ್ತು ಅವರ ಪೋಟೋಗಳನ್ನು ಕುಟುಂಬದವರಿಗೆ ಕಳುಹಿಸಿ ಮಾನಹಾನಿ ಮಾಡುವ ಬೆದರಿಕೆ ಹಾಕಿದ್ದಾರೆ.

ಇವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ವಹಿಸಬೇಕು ಎಂದು ಮಹಿಳೆಯ ಪುತ್ರಿ ದೂರಿನಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net