

ಕಾರವಾರ:ಮಾಜಾಳಿ ತನಿಖಾ ಠಾಣೆಯಲ್ಲಿ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅಬಕಾರಿ ಇಲಾಖೆಯ ಇಬ್ಬರು ಅಽಕಾರಿಗಳ ಮೇಲೆ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು ಮೂಲದ ಚಾಲಕ ಎ.ಆರ್.ಕುಮಾರ್ ಎಂಬುವವರು ಮಾಜಾಳಿ ತನಿಖಾ ಠಾಣೆಯ ಅಬಕಾರಿ ಅಽಕಾರಿಗಳಾದ ಸದಾಶಿವ ಕೊರಾಟಿ ಹಾಗೂ ಹೇಮಚಂದ್ರ ವಿರುದ್ಧ ದೂರು ನೀಡಿದ್ದಾರೆ.
ಅ.15 ರಂದು ಚಾಲಕ ಕುಮಾರ್ ಗೋವಾದಿಂದ ಕೇರಳಕ್ಕೆ ತೆರಳುವಾಗ ಮಾಜಾಳಿ ತನಿಖಾ ಠಾಣೆಯಲ್ಲಿ ಅಬಕಾರಿ ಅಽಕಾರಿಗಳು ತಡೆದಿದ್ದರು. ಲಾರಿಯ ಹಿಂಬದಿ ಮುಚ್ಚಲಾಗಿದ್ದ ಟಾರ್ಪಲ್ ಬಿಚ್ಚಿ ತೋರಿಸುವಂತೆ ಸೂಚಿಸಿದ್ದರು. ಅದಕ್ಕೆ ಕುಮಾರ್ ಒಪ್ಪದೇ ಇದ್ದಾಗ ಆತನ ಕಪಾಳಕ್ಕೆ ಹೊಡೆದಿದ್ದರು. ಕೆಲಕಾಲ ಆತನನ್ನು ಕೂಡಿಟ್ಟುಕೊಂಡು ಬಿಟ್ಟು ಕಳಿಸಿದ್ದರು. ಕೆಲ ಕಾಲದ ನಂತರ ಕುಮಾರ್ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ವಿಡಿಯೋ ವೈರಲ್ ಆದ ನಂತರ ಜನಶಕ್ತಿ ವೇದಿಕೆಯ ಮಾಧವ ನಾಯ್ಕ ಕುಮಾರ್ ಅವರನ್ನು ಸಂಪರ್ಕಿಸಿ, ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ತಿಳಿಸಿದ್ದರು. ಒಂದು ದಿನದ ನಂತರ ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.