ಹೆರಿಗೆ ವೇಳೆ ಮಹಿಳೆ ಮೃತ್ಯು ವೈದ್ಯರ ವಿರುದ್ಧ ಎಫ್‌ಐಆರ್

FIR-2
Published on

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಗೆ ಹೆರಿಗೆಗೆಂದು ಜೂ.14ರಂದು ಮಧ್ಯರಾತ್ರಿ 12 ಗಂಟೆಗೆ ದಾಖಲಾಗಿದ್ದ ಹಳೆಯಂಗಡಿ ಚೇಳಾರಿನ ವನಿತಾ (34) ಅವರು ಜೂ.15ರ ಮುಂಜಾನೆ 3.37ರ ಗಂಡು ಮಗುವಿಗೆ ಜನ್ಮ ನೀಡಿದ್ದು, ಆದರೆ ತೀವ್ರ ರಕ್ತಸ್ರಾವದ ಕಾರಣ 5.55ರ ವೇಳೆಗೆ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷೃ ಎಂದು ಕುಟುಂಬಸ್ಥರು ಆರೋಪಿಸಿದ್ದು, ಬಂದರು ಪೊಲೀಸ್ ಠಾಣೆಯಲ್ಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.

ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪ.ಜಾ.-ಪ.ಪಂಗಡದವರ ಕುಂದು ಕೊರತೆ ಸಭೆಯಲ್ಲಿ ವಿಚಾರವನ್ನು ದಲಿತ ಮುಖಂಡ ಸುಧಾಕರ ಬೊಳೂರು ಪ್ರಸ್ತಾಪಿಸಿದರು.

ಮಹಿಳೆಗೆ ಸಹಜ ಹೆರಿಗೆಯಾಗಿದೆ. ಬಳಿಕ ಮಗುವನ್ನು ಎನ್‌ಐಸಿಯುಗೆ ಶಿಪ್ಟ್ ಮಾಡಲಾಗಿದ್ದು, ಮಗು ಬದುಕಿದೆ. ಮಹಿಳೆಗೆ ತೀವ್ರ ರಕ್ತಸ್ರಾವವಾಗಿ ಸುಸ್ತಾಗಿದೆ, ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಆಕೆಯ ಪತಿಯಲ್ಲಿ ವೈದ್ಯರು ತಿಳಿಸಿದ್ದರು. ಆಕೆಯನ್ನು ಐಸಿಯುಗೆ ಶ್‌ಟಿ ಮಾಡುವಲ್ಲಿ ವಿಳಂಬ ಮಾಡಿದ ಕಾರಣ ಸಾವು ಸಂಭವಿಸಿದೆ. ಮಹಿಳೆಗೆ ಈಗಾಗಲೇ ಒಂದು ಹೆಣ್ಣು ಮಗುವಿದ್ದು, ಈಗ ಮಕ್ಕಳಿಗೆ ತಾಯಿ ಇಲ್ಲದಂತಾಗಿದೆ ಎಂದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಂದರು ಠಾಣೆ ಇನ್ಸ್‌ಪೆಕ್ಟರ್, ಘಟನೆಗೆ ಸಂಬಂಧಿಸಿದಂತೆ ವೈದ್ಯರ ವಿರುದ್ಧ ಎ್ಐಆರ್ ದಾಖಲಾಗಿದೆ. ಪೋಸ್ಟ್‌ಮಾರ್ಟಂ ನಡೆಸಲಾಗಿದ್ದು, ಎ್ಎಸ್‌ಎಲ್ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಕರಣ ತನಿಖೆಯಲ್ಲಿದೆ. ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ, ವಿಶೇಷ ಪ್ರಕರಣವೆಂದು ಪರಿಗಣಿಸಲು ವೈದ್ಯಕೀಯ ಮಂಡಳಿಗೆ ತಿಳಿಸಲಾಗಿದೆ ಎಂದು ಡಿಸಿಪಿ ಸಿದ್ದಾರ್ಥ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net