ದಶಮಂಟಪ ಸಮಿತಿಗಳ ವಿರುದ್ಧ ಎಫ್‌ಐಆರ್

dasamantapa samithi
Published on

ಮಡಿಕೇರಿ: ಮಡಿಕೇರಿ ದಸರಾ ಶೋಭಾಯಾತ್ರೆಯಲ್ಲಿ ಡಿಜೆ ಬಳಕೆ ಆರೋಪದ ಮೇಲೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದಶಮಂಟಪ ಸಮಿತಿಯ ೬೨ ಸದಸ್ಯರ ಮೇಲೆ ಪ್ರಕರಣ ದಾಖಲಾಗಿದ್ದು, ಬುಧವಾರ ೧೦ ಮಂಟಪಗಳ ಸಮಿತಿಯ ಸದಸ್ಯರು ನೋಟಿಸ್ ಸ್ವೀಕರಿಸಿದರು.

ಶೋಭಾಯಾತ್ರೆಯಂದು ರಾತ್ರಿ ೧೦ ಗಂಟೆ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸಬಾರದು ಎಂಬ ನ್ಯಾಯಾಲಯದ ಆದೇಶವಿದ್ದರೂ ಹೆಚ್ಚು ಶಬ್ಧಸೂಸುವ ಧ್ವನಿವರ್ಧಕಗಳನ್ನು ಬಳಸಿ ಕೋರ್ಟ್ ಆದೇಶ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ೧೦ ಮಂಟಪಗಳ ತಲಾ ೫ ಸದಸ್ಯರು ಮತ್ತು ಧ್ವನಿವರ್ಧಕದ ಮಾಲೀಕರು ಹಾಗೂ ಧ್ವನಿವರ್ಧಕ ಹೊತ್ತಿದ್ದ ವಾಹನದ ಚಾಲಕರ ಮೇಲೆ ಸೆಕ್ಷನ್ ೩೭, ೧೦೯, ಮತ್ತು ಬಿಎಸ್‌ಎಸ್ ಆಕ್ಟ್ ೨೯೨ ಅಡಿ ಪ್ರಕರಣ ದಾಖಲಿಸಿ ನೋಟಿಸ್ ಜಾರಿ ಮಾಡಲಾಗಿದೆ.

ಈ ಹಿನ್ನೆಲೆ ಕೋಟೆಗಣಪತಿ ದಸರಾ ದಶಮಂಟಪ ಸಮಿತಿ ಅಧ್ಯಕ್ಷ ಹರೀಶ್ ಅಣ್ವೇಕರ್, ಕೋಟೆಗಣಪತಿ ದಸರಾ ದಶಮಂಟಪ ಸಮಿತಿ ಗೌರವ ಅಧ್ಯಕ್ಷ ಬಿ.ಎಂ.ರಾಜೇಶ್, ವಿನೋದ್ ಕಾರ್ಯಪ್ಪ, ಬಿ.ಕೆ.ಜಗದೀಶ್, ಉಮೇಶ್, ಶಿವುಮೂರ್ತಿ ಸೇರಿದಂತೆ ದಶಮಂಟಪ ಸಮಿತಿಗಳ ಪದಾಧಿಕಾರಿಗಳು ನಗರ ಪೊಲೀಸ್ ಠಾಣೆಯಲ್ಲಿ ನೋಟಿಸ್ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net