ಡಾ.ಖರ್ಗೆಗೆ ನಿಂದಿಸಿದ ಸೂಲಿಬೆಲೆ ವಿರುದ್ಧ ಕೇಸ್

chakravarti sulibele
Published on

ಕಲಬುರಗಿ: ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಾಚ್ಯ ಶಬ್ಧಗಳಿಂದ ಜಾತಿ ಕಾರಣಕ್ಕೆ ನಿಂದಿಸಿದ ಆರೋಪದಲ್ಲಿ ನಮೋ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ವಿರುದ್ಧ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್‌ಐಆರ್ ದಾಖಲಾಗಿದೆ. ನಮೋ ಬ್ರಿಗೇಡ್‌ನಿಂದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನಲ್ಲಿ ಜ.೧೮ರಂದು ಹಮ್ಮಿಕೊಂಡ ಕಾರ್ಯಕ್ರಮಲ್ಲಿ ಚಕ್ರವರ್ತಿ ಸೂಲಿಬೆಲೆ ಮಾತನಾಡುವ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಯೋಗ್ಯ ಎಂದು ನಿಂದಿಸಿದ್ದು, ಅದರ ಸಾಕ್ಷ್ಯಾಧಾರಗಳನ್ನು ದೂರಿನ ಜತೆಗೆ ನೀಡಿದ್ದು, ಎಫ್‌ಐಆರ್ ದಾಖಲಿಸಿ, ಸೂಕ್ತ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ನಗರ ಪೊಲೀಸ್ ಆಯುಕ್ತ ಚೇತನ್ ಅವರಿಗೆ ಶುಕ್ರವಾರ ಮನವಿ ನೀಡಿದ್ದರು. ಕಲಂ ೧೫೩(ಎ), ೧೫೩(ಬಿ) ಐಪಿಸಿ ಮತ್ತು ಕಲಂ ೩(೨), ವಿಎ ಎಸ್‌ಸಿ/ಎಸ್‌ಟಿ ಪಿಎ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net