ಬೆರಳು ಮುದ್ರೆಗಳ ಗುರುತುಗಳನ್ನು ಕಳ್ಳತನ ಮಾಡಿ 10 ಸಾವಿರ ರೂ. ವಂಚನೆ

Crime Logo
Published on

ಹಾನಗಲ್ಲ: ವ್ಯಕ್ತಿಯೊಬ್ಬನ ಬೆರಳು ಮುದ್ರೆಗಳ ಗುರುತುಗಳನ್ನು ಕಳ್ಳತನ ಮಾಡಿ ಎಇಪಿಎಸ್ (ಆಧಾರ್ ಎನೇಬಲ್ಡ ಪೇಮೆಂಟ್ ಸಿಸ್ಟಂ) ಮೂಲಕ 10 ಸಾವಿರ ರೂ. ವರ್ಗಾಯಿಸಿಕೊಂಡು ಮೋಸ ಮಾಡಿದ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ಪಟ್ಟಣಶೆಟ್ಟಿಗಲ್ಲಿಯ ರಾಜೇಶ ಗೋವಿಂದಪ್ಪ ಗುಡಿ (50) ಮೋಸ ಹೋದವರು.
ಯಾರೋ ಆರೋಪಿ ಇವರ ಬೆರಳು ಮುದ್ರೆಗಳ ಗುರುತುಗಳನ್ನು ಯಾವುದೋ ರೀತಿಯಿಂದ ಕಳ್ಳತನ ಮಾಡಿದ್ದಾರೆ. ನಂತರ ಪಟ್ಟಣದ ಕನಕ ವೃತ್ತದ ಎಸ್‌ಬಿಐ ಬ್ಯಾಂಕ್‌ನಲ್ಲಿ ರಾಜೇಶನಂತೆ ನಟಿಸಿ 10 ಸಾವಿರ ರೂ.ಅನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ ಎನ್ನಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net