ಅನರ್ಹರ ವೈದ್ಯರಿಗೆ ದಂಡ, ಕ್ಲಿನಿಕ್ ಗಳ ಬಂದ್

23cbp5.jpg
Published on

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 7 ನಕಲಿ ಕ್ಲಿನಿಕ್ ಗಳನ್ನು ಸೀಜ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕೈಗೊಂಡಿದ್ದ ಕೆಪಿಎಂಇ, ಪಿ.ಸಿ ಹಾಗೂ  ಪಿಎನ್ಡಿಟಿ ನೋಂದಣಿ ಹಾಗೂ ಕುಂದುಕೊರತೆ ನಿವಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ನಕಲಿ ವೈದ್ಯರು, ಕ್ಲಿನಿಕ್ಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಬೇಸರಿಸಿದರು.
ಈ ಸಂರ್ದಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಎಸ್.ಮಹೇಶ್ ಕುಮಾರ್, ಜಿಲ್ಲಾ ಅಯುಷ್ ಅಧಿಕಾರಿ ತಬೀಬಾ ಭಾನು ಮತ್ತಿತರರು ಇದ್ದರು.

*ದಂಡ ವಸೂಲಿ  
ಆರೋಗ್ಯ ಇಲಾಖೆಗಳು ಅನಿರಿ ಕ್ಷಿತ ದಾಳಿ ಕೈಗೊಂಡು ಗೌರಿಬಿದನೂರು ಮತ್ತು ಚಿಂತಾಮಣಿ ತಾಲೂಕುಗಳ ವ್ಯಾಪ್ತಿಯಲ್ಲಿನ 7 ನಕಲಿ ಕ್ಲಿನಿಕ್ ಗಳನ್ನು ಬಂದ್ ಮಾಡಿಸಲಾಗಿದೆ.
ಸೂಕ್ತ ವೈದ್ಯಕಿಯ ವಿದ್ಯಾರ್ಹತೆ ಹೊಂದಿಲ್ಲದಿದ್ದರೂ ಕ್ಲಿನಿಕ್ಗಳನ್ನು ತೆರೆದು, ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಚಿಕಿತ್ಸೆ ನೀಡುತ್ತಿದ್ದ ಗೌರಿಬಿದನೂರು ತಾಲೂಕಿನ ಎ.ನಾಗಭೂಷಣ್, ಶ್ರೀನಿವಾಸಚಾರಿ, ಸೈಫುಲ್ಲಾ, ರಾಮಕೃಷ್ಣಾರೆಡ್ಡಿ, ಕೃಷ್ಣಾರೆಡ್ಡಿ, ಫಕೃದ್ದೀನ್ ಹಾಗೂ ಚಿಂತಾಮಣಿ ತಾಲೂಕಿನ ಮುನೀರ್, ಬಿ.ನಾರಾಯಣರೆಡ್ಡಿ ಎಂಬುವವರಿಗೆ 50,000 ದಂಡವನ್ನು ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net