

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಚಾರ ನಿಯಮ ಉಲ್ಲಂಘನೆಗೆ ಸಂಬ0ಧಿಸಿ ವಾಹನಗಳ ಮೇಲೆ ದಾಖಲಾಗಿರುವ ಪ್ರಕರಣಗಳ ದಂಡಗಳಿಗೆ ರಾಜ್ಯ ಸರ್ಕಾರ ಅರ್ಧ ಮೊತ್ತ ಪಾವತಿಸಲು ಅವಕಾಶ ನೀಡಿದೆ. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ್ದ ನರೇಂದ್ರ ಗ್ರಾಮದ ಕರಿಯಪ್ಪ ಕಾಳಿ ಎಂಬಾತನ ದ್ವಿಚಕ್ರ ವಾಹನದ ಮೇಲೆ 36 ಪ್ರಕರಣಗಳು ದಾಖಲಾಗಿದ್ದವು. ಸರ್ಕಾರ ನೀಡಿರುವ ರಿಯಾಯಿತಿಯ ಮಾಹಿತಿ ತಿಳಿದ ಕರಿಯಪ್ಪ, ಸೋಮವಾರ ಸಂಚಾರ ಪೊಲೀಸ್ ಠಾಣೆಯ ಎಎಸ್‌ಐ ಸೀತಾ ಕಟಗಿ, ಸಿಬ್ಬಂದಿ ಅಷ್ಪಕ್ ಬಡಕಾಶಪ್ಪನವರ ಅವರನ್ನು ಭೇಟಿ ಮಾಡಿ 9 ಸಾವಿರ ರೂಪಾಯಿ ದಂಡ ಭರಿಸಿದ್ದಾನೆ. ಇನ್ನು ಮುಂದೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಪೊಲೀಸರು ಕರಿಯಪ್ಪನಿಗೆ ತಾಕೀತು ಮಾಡಿದ್ದಾರೆ.