

ಕಾರವಾರ: ತಂಬಾಕು ನಿಷೇಧದ ನಿಯಮಾವಳಿಗಳನ್ನು ಮೀರಿ ಅಂಥ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ಗುರುವಾರ ಅಧಿಕಾರಿಗಳ ತಂಡ ಬಿಸಿ ಮುಟ್ಟಿದಿದೆ.
ನಗರದ 15 ಅಂಗಡಿಗಳ ಮೇಲೆ ತಂಡದ ಸದಸ್ಯರು ದಾಳಿ ನಡೆಸಿ, ಕೊಟ್ಪಾ ಕಾಯ್ದೆ ನಿಯಮ ಪಾಲನೆಯ ಬಗ್ಗೆ ಪರಿಶೀಲಿಸಿದರು. ನಿಯಮ ಮುರಿದ ಅಂಗಡಿಗಳಿಂದ ಒಟ್ಟು 5,600 ರೂ. ದಂಡ ಸಂಗ್ರಹಿಸಲಾಯಿತು.
ಇದನ್ನೂ ಓದಿ:ತರಬೇತಿಯಿಂದ ಕಡಿಮೆಯಾಗಲಿದೆ ಬೆಳೆ ನಷ್ಟ
ಈ ಸಂದರ್ಭದಲ್ಲಿ ತನಿಖಾ ದಳದ ಸದಸ್ಯರಾದ ರೂಪ ಬಾಡ್ಕರ್, ಆರ್‌ಐ ದೀಪಾ ನಾಯ್ಕ, ನಯನ ಪಡ್ತಿ, ದೀಪಾಶೆಟ್ಟಿ, ಮಿನಿನ್ ಲೋಡಿಸ್, ಸುನೀತಾ ಗುರವ ಇತರರು ಇದ್ದರು.
ಜಾಗೃತಿ ಕಾರ್ಯಕ್ರಮ:
ದಾಳಿಗೂ ಪೂರ್ವ ತಹಸೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ತಹಸೀಲ್ದಾರ್ ನಿಶ್ಚಲ ನರೋನಾ ಅಧ್ಯಕ್ಷ ತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ.ಸೂರಜಾ ನಾಯಕ ಮಾತನಾಡಿ, ಶಾಲೆಗಳ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರುವಂತಿಲ್ಲ.
ಈ ಬಗ್ಗೆ ಅಂಗಡಿಕಾರರಿಗೆ ಎಚ್ಚೆರಿಕೆ ನೀಡಬೇಕು. ಧೂಮಪಾನ ವಲಯವಲ್ಲ ಎಂಬ ಬೋರ್ಡ್ನ್ನು ಕಡ್ಡಾಯವಾಗಿ ಹಾಕಬೇಕು. ಪಾಲಕರಿಗೂ ಶಾಲೆಗಳ ಸಭೆಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.