

ಕಡಬ: ಪಾಲ್ತಾಡಿ ಗ್ರಾಮದ ನಾಡೋಳಿ ಗೌರಿ ಹೊಳೆಗೆ ತ್ಯಾಜ್ಯ ಸುರಿದಾತನಿಗೆ ಸವಣೂರು ಗ್ರಾಪಂ 3 ಸಾವಿರ ರೂ. ದಂಡ ವಿಧಿಸಿದೆ.
ಹೊಳೆಗೆ ತ್ಯಾಜ್ಯ ಸುರಿಯುತ್ತಿರುವುದನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ವಿಡಿಯೋ ಮಾಡಿ ಗ್ರಾಪಂ ಗಮನಕ್ಕೆ ತಂದಿದ್ದು, ವಾಹನದ ಗುರುತು ಪತ್ತೆಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಅದರಂತೆ ಪೊಲೀಸ್ ಇಲಾಖೆ ನೀಡಿದ ಮಾಹಿತಿಯಂತೆ ತ್ಯಾಜ್ಯ ಸುರಿಯುತ್ತಿದ್ದವನನ್ನು ಸಂಪರ್ಕಿಸಿ ಗ್ರಾಪಂಗೆ ಬರುವಂತೆ ಸೂಚಿಸಲಾಗಿತ್ತು. ಗ್ರಾಪಂಗೆ ಬಂದಾತನಿಗೆ 3 ಸಾವಿರ ರೂ. ದಂಡ ವಿಧಿಸಿ ತಿಳಿವಳಿಕೆ ನೀಡಿ ಕಳುಹಿಸಲಾಗಿದೆ.