ತಾವರಗಿ ಪಿಡಿಒ ಸತೀಶಗೆ ದಂಡ

Published on

ಹಿರೇಕೆರೂರ: ಕರ್ತವ್ಯಲೋಪ ಎಸಗಿರುವ ತಾಲೂಕಿನ ತಾವರಗಿ ಪಿಡಿಒ ಸತೀಶ ಎಂ.ಎನ್. ಅವರಿಗೆ ದಂಢ ವಿಧಿಸುವಂತೆ ಜಿಪಂ ಸಿಇಒ ಆದೇಶಿಸಿದ್ದಾರೆ.

ರಾಜ್ಯ ಮಾಹಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಮರಿಗೌಡ್ರ ಅವರು ಸತೀಶ ವಿರುದ್ಧ ದೂರು ನೀಡಿದ್ದರು.

ಕಚೇರಿಯ ಎಲ್ಲ ಹಣಕಾಸು ಲೆಕ್ಕಪತ್ರಗಳನ್ನು ಪಂಚತಂತ್ರದಲ್ಲಿ ಅಳವಡಿಸದಿರುವುದು, 2022ರ ಜ.22ರಂದು ಮಾನವದಿನಗಳ ಸೃಜನೆ, ಆಧಾರ ಜೋಡಣೆ ಪ್ರಗತಿ ಹಾಗೂ ಕೂಲಿ, ಪ್ರಗತಿ ಕುಂಠಿತವಾಗಿರುವ ಬಗ್ಗೆ ನೀಡಿದ ನೋಟಿಸ್‌ಗೆ ಉತ್ತರಿಸದಿರುವುದು, 14, 15ನೇ ಹಣಕಾಸು ಯೋಜನೆಯ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು, ನಿಯಮಾನುಸಾರ ದಾಖಲೆ ನಿರ್ವಹಿಸದಿರುವುದು ಹಾಗೂ ಯೋಜನೆಗಳ ಮಾರ್ಗಸೂಚಿಗಳನ್ನು ಪಾಲಿಸದಿರುವುದು, ಸರ್ಕಾರದ ಅನುದಾನ ದುರಪಯೋಗ, ಕಾವ್ಯಾ ಅಜ್ಜಪ್ಪನವರ ಎಂಬುವವರನ್ನು ನಿಯಮಬಾಹಿರವಾಗಿ ನೇಮಕ ಮಾಡಿಕೊಂಡು ವೇತನ ಪಾವತಿಸಿರುವುದು, ಸರಕು-ಸಾಮಗ್ರಿ ಖರೀದಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳದಿರುವ ಕುರಿತ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಗಳ ಅನುಸಾರ ಎರಡು ವಾರ್ಷಿಕ ವೇತನ ಬಡ್ತಿಯನ್ನು ಸಂಚಿತ ಪರಿಣಾಮ ಸಹಿತವಾಗಿ ತಡೆಹಿಡಿಯುವ ದಂಡನೆ ವಿಧಿಸಿ ಕ್ರಮಕೈಗೊಳ್ಳಬೇಕು. ಪ್ರಸ್ತುತ ಪಿಡಿಒ ಸತೀಶ ಎಂ.ಎನ್. ಚಾಮರಾಜನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿನ ತಾಪಂ ಇಒ ಅವರಿಗೆ ಈ ಆದೇಶ ಹೊರಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net