ವಿಜಯೇಂದ್ರಗೆ ಭವಿಷ್ಯ ಹೇಳಲು ಜಾಗ ಹುಡುಕಾಟ

education minister madhu bangarappa
ಸಚಿವ ಮಧು ಬಂಗಾರಪ್ಪ
Published on

ಶಿವಮೊಗ್ಗ: ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಇನ್ಮುಂದೆ ಭವಿಷ್ಯ ಹೇಳುವುದಕ್ಕೆ ಬಸ್ ಸ್ಟ್ಯಾಂಡ್ ಪಕ್ಕ ಖಾಲಿ ಜಾಗವನ್ನು ಹುಡುಕುತ್ತಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ವ್ಯಂಗ್ಯವಾಡಿದರು.

ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದಿಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಕ್ಸಸ್ ಕಂಡಿದ್ದಾರೆ. ವಿಶೇಷವಾಗಿ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಯಶಸ್ಸು ಕಂಡಿದ್ದು ಇನ್ಮುಂದೆ ಬಿ.ವೈ.ವಿಜಯೇಂದ್ರ ಬಿಜೆಪಿಯಲ್ಲಿ ಬೇರೆ ಸ್ಥಾನ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.

ವಿಜಯೇಂದ್ರ ಅವರ ತಂದೆ(ಬಿ.ಎಸ್.ಯಡಿಯೂರಪ್ಪ)ಯಂತೆ ಹೋರಾಟ ಮಾಡಿಕೊಂಡು ಬಂದವರಲ್ಲ. ರಾಜಕೀಯದ ಬಗ್ಗೆ ಅವರಿಗೆ ಪೂರ್ಣ ಅರಿವಿಲ್ಲ. ಅವರ ತಟ್ಟೆಯಲ್ಲೆ ಕೊಳೆತ ಹೆಗ್ಗಣ ಬಿದ್ದಿದ್ದರೂ ಸಿಎಂ ಸಿದ್ದರಾಮಯ್ಯ ಅವರ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಹಾಗಾಗಿ ಬಿಜೆಪಿ ರಾಜ್ಯಾಧ್ಯಕ್ಷರು ಇನ್ಮುಂದೆ ಕಾಂಗ್ರೆಸ್ ಬಗ್ಗೆ ಭವಿಷ್ಯ ಹೇಳಿಕೊಂಡೇ ಇರಲೆಂದು ಬಸ್‌ ಸ್ಟ್ಯಾಂಡ್ ನಲ್ಲಿ ಕೂರಿಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net