

ವಿಜಯಪುರ: ಅನುಭವಗಳು ಇಂದ್ರಿಯ ಜನ್ಯವಾಗಿ ಮೂರ್ತ ಸ್ವರೂಪ ಪಡೆದರೆ, ಅನುಭಾವಗಳು ಸಾಧಕರಿಗೆ ಅನುಗುಣವಾಗಿ ಅಮೂರ್ತವಾಗಿದ್ದು ಅವು ಭಿನ್ನ ಭಿನ್ನ ರೂಪ ತಾಳುತ್ತವೆ. ಅವುಗಳನ್ನು ಮರೆಯದಂತೆ ಇರಿಸಿಕೊಳ್ಳುವುದೇ ಅನುಭೂತಿಯಾಗಿದೆ ಎಂದು ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಹೇಳಿದರು.
ನಗರದ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಇತ್ತೀಚೆಗೆ ಅನುಭಾವಿಗಳು; ಮರುಭೆಟ್ಟಿ ಎಂಬ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು, ಪಂಚೇಂದ್ರಿಯಗಳು ವಿಷಯಗಳ ಜ್ಞಾನವನ್ನು ಬಹಿಂದ್ರೀಯವಾಗಿ ಹರವುತ್ತವೆ. ಕರ್ಮೆಂದ್ರೀಯಗಳು ಅಂತರಿಂದ್ರಿಯ ಮೂಲಕವಾಗಿ ಅಂತರಂಗದ ಶುದ್ಧಿಯನ್ನು ಮಾಡಿ ಅನುಭಾವದ ನೆಲೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬಿ.ಎಂ. ಪಾಟೀಲ ಪ್ರಾರ್ಥಿಸಿದರು. ಡಾ. ವಿ.ಡಿ. ಐಹೊಳ್ಳಿ ಸ್ವಾಗತಿಸಿ ಪರಿಚಯಿಸಿದರು. ಡಾ. ಎಂ.ಎಸ್. ಮದಭಾವಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಸುಭಾಸ ಕನ್ನೂರ ಕಾರ್ಯಕ್ರಮ ನಿರೂಪಿಸಿದರು. ಡಾ. ಎಸ್.ಐ. ಮೇತ್ರಿ ವಂದಿಸಿದರು.
ವಿ.ಸಿ. ನಾಗಠಾಣ, ಎನ್.ಆರ್. ಕುಲಕರ್ಣಿ, ಎಸ್.ಎಂ. ಕಣಬೂರ, ಜಂಬುನಾಥ ಕಂಚ್ಯಾಣಿ, ಡಾ. ಮಲ್ಲಿಕಾರ್ಜುನ ಮೇತ್ರಿ, ದೊಡ್ಡಣ್ಣ ಬಜಂತ್ರಿ, ಡಾ. ಚೇತನಾ ಸಂಕೊಂಡ, ಜಗದೀಶ ಗಲಗಲಿ, ಎಂ.ಆರ್. ಬಡಿಗೇರ, ಮಲ್ಲಮ್ಮ ಬಿರಾದಾರ, ಶಾರದಾ ಐಹೊಳ್ಳಿ, ಶೈಲಜಾ ಮೋದಿ, ಲಕ್ಷಿ$್ಮ ಮೋರೆ, ಡಾ. ಮಾಧವ ಗುಡಿ, ಡಾ. ಮೀನಾ ಪಾಟೀಲ, ಬಿ.ಸಿ. ಹತ್ತಿ, ದಾಾಯಣಿ ಬಿರಾದಾರ, ದಾಾಯಣಿ ಹುಡೇದ, ಸಂಗಮೇಶ ಬದಾಮಿ, ಡಾ. ಸೋಮಶೇಖರ ವಾಲಿ, ಡಾ. ವಿ.ಎಂ. ಬಾಗಾಯತ, ಸುಭಾಸ್ ಯಾದವಾಡ, ಡಾ. ಪ್ರಕಾಶ ಪರನಾಕರ, ಹೇಮಲತಾ ವಸದ, ಎಸ್.ಎನ್. ಶಿವಣಗಿ, ಬಿ.ಎಚ್. ಹಿರೇಮಠ, ಜಿ.ಬಿ. ಸಾಲಕ್ಕಿ, ಡಾ. ಶಶಿಧರ ಶಿರಹಟ್ಟಿ, ಎಂ.ಬಿ.ಕಟ್ಟಿಮನಿ, ಡಾ. ರಮೇಶ ತೇಲಿ, ಎಸ್.ಬಿ. ನಾಡಗೌಡರ, ಬಿ.ಟಿ. ಈಶ್ವರಗೊಂಡ, ಎಂ.ಎಸ್. ಹಾಲಳ್ಳಿ, ಜೆ.ಎಸ್. ಮೋಟಗಿ ಮತ್ತಿತರರಿದ್ದರು.