

ರಬಕವಿ/ಬನಹಟ್ಟಿ : ಪ್ರತಿಯೊಬ್ಬರೂ ತೃಪ್ತಿಯಿಂದ ದಾಸೋಹ ಸೇವೆ ಮಾಡಿದಾಗ ಮಾತ್ರ ಅದರಲ್ಲೇ ದೇವರನ್ನು ಕಾಣಲು ಸಾಧ್ಯ ಎಂದು ಹಿರಿಯ ಸಾಹಿತಿ, ವಿಮರ್ಶಕ ಸಿದ್ಧರಾಜ ಪೂಜಾರಿ ಹೇಳಿದರು.
ರಬಕವಿಯ ದಾನಮ್ಮದೇವಿ ದೇವಸ್ಥಾನದಲ್ಲಿ ಭಾನುವಾರ ಅಮಾವಾಸ್ಯೆಯಂದು ನಿರಂತರ ಅನ್ನ ದಾಸೋಹ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಯುಗಾದಿಯಿಂದ ಸತತವಾಗಿ ದಾಸೋಹದಲ್ಲಿ ತೊಡಗಿರುವ ಸೋಮಶೇಖರ ಕೊಟ್ರಶೆಟ್ಟಿ ಹಾಗೂ ಮಲ್ಲಿಕಾರ್ಜುನ ನಾಶಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ದಾನಮ್ಮದೇವಿ ಟ್ರಸ್ಟ್ ಅಧ್ಯಕ್ಷ ಶಿವಜಾತ ಉಮದಿ ಮಾತನಾಡಿ, ಅನ್ನದಾನಕ್ಕೆ ಸಮನಾದ ದಾನ ಬೇರೋಂದಿಲ್ಲ. ಇದು ಅತ್ಯಂತ ಶ್ರೇಷ್ಠ ದಾನ ಎಂದರು.
ಬಸವರಾಜ ದಲಾಲ, ಎಸ್.ಎಂ. ದಾಶ್ಯಾಳ, ಪ್ರಕಾಶ ಕುಂಬಾರ, ಮಲ್ಲಿಕಾರ್ಜುನ ಗಡೆನ್ನವರ, ಮಲ್ಲು ತುಂಗಳ, ಸಂಗಮೇಶ ಗುಣಕಿ, ಪುಂಡಲೀಕ ಬಾವಂಜಿ, ಈಶ್ವರಪ್ಪ ಪರಮಶೆಟ್ಟಿ, ಮಹಾಂತೇಶ ಬೆಟಗೇರಿ, ಬಸವರಾಜ ಚಿಂಚಕಂಡಿ, ಅಮಿತ ನಾಶಿ ಸೇರಿ ಇತರರಿದ್ದರು.