

ಸಮಾಜದಲ್ಲಿನ ತಾರತಮ್ಯ ಮತ್ತು ಜಾತಿ ವ್ಯವಸ್ಥೆಗೆ ವಿಜ್ಞಾನಿಗಳು ಔಷಧ ಕಂಡು ಹಿಡಿಯಬೇಕಾಗಿದೆ ಎಂದು ರಂಗಕರ್ಮಿ ಸಿ.ಬಸವಲಿಂಗಯ್ಯ ಹೇಳಿದರು.
ಸಿಎಸ್‌ಐಆರ್-ಸಿಎಫ್‌ಟಿಆರ್‌ಐ ಎಸ್‌ಸಿ/ಎಸ್‌ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಐಎಫ್‌ಟಿಟಿಸಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದರು.
ಆ ಔಷಧವನ್ನು ಸೇವಿಸಿದ ಕೂಡಲೇ ಸಮಾಜದಿಂದ ಜಾತಿ ವ್ಯವಸ್ಥೆ ಓಡಿ ಹೋಗುವಂತೆ ಔಷಧ ಸಂಶೋಧಿಸಬೇಕಾಗಿದೆ. ನಾವು ಚಂದ್ರಯಾನಕ್ಕೆ ಹೋದರೂ ಮ್ಯಾನ್‌ಹೋಲ್‌ಗೆ ಇಳಿಯುತ್ತಿದ್ದೇವೆ. ಈಗ ಯಾರು ಮನುಷ್ಯರಾಗದೆ ಕೇವಲ ಜಾತಿಯಾಗಿದ್ದೇವೆ. ವಿದೇಶಕ್ಕೆ ಹೋದರೂ ಜಾತಿಯನ್ನು ಕೊಂಡೊಯ್ಯುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಸಿಎಸ್‌ಐಆರ್-ಸಿಎಫ್‌ಟಿಆರ್‌ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್, ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಸ್ವಾಮಿ ಇದ್ದರು.