

ಎನ್.ಆರ್.ಪುರ: ಸಂಜೀವಿನಿ ಒಕ್ಕೂಟ ಪ್ರತಿ ಆರ್ಥಿಕ ವರ್ಷದ ಆಂತರಿಕ ಮತ್ತು ಶಾಸನ ಬದ್ದ ಲೆಕ್ಕ ಪರಿಶೋಧನೆ ಮಾಡಿಸಬೇಕು ಎಂದು ಎನ್‌ಆರ್‌ಎಲ್‌ಎಂನ ತಾಲೂಕು ವ್ಯವಸ್ಥಾಪಕ ಸುಬ್ರಹ್ಮಣ್ಯ ಸಲಹೆ ನೀಡಿದರು.
ಮುತ್ತಿನಕೊಪ್ಪ ಗ್ರಾಪಂನ ಸಂಜೀವಿನಿ ಒಕ್ಕೂಟದ ಸಭಾಂಗಣದಲ್ಲಿ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ಸಭೆಯಲ್ಲಿ ಮಾತನಾಡಿ, ಪ್ರತಿ ವರ್ಷ ವಾರ್ಷಿಕ ಮಹಾ ಸಭೆ ಆಯೋಸ ಬೇಕು. ಒಕ್ಕೂಟದ ವಾರ್ಷಿಕ ಆದಾಯ, ವೆಚ್ಚಗಳ ಬಗ್ಗೆ ಚರ್ಚೆ ನಡೆಸಿ ಅನುಮೋದನೆ ಪಡೆಯಬೇಕು.ಒಕ್ಕೂಟದ ಮುಂದಿನ ಯೋಜನೆಗಳ ಬಗ್ಗೆ ತೀರ್ಮಾನಿಸ ಬೇಕು ಎಂದು ಸಲಹೆ ನೀಡಿದರು.
ಮುತ್ತಿನಕೊಪ್ಪ ಗ್ರಾಪಂ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಮತಾ ಮಾತನಾಡಿ, ಮಂದಿನ ದಿನಗಳಲ್ಲಿ ಸಂಜೀವಿನಿ ಒಕ್ಕೂಟದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಗ್ರಾಪಂ ವ್ಯಾಪ್ತಿಯ ಅರ್ಹ ಮಹಿಳೆಯರು ಸ್ವ ಸಹಾಯ ಸಂಘಗಳಿಗೆ ಸೇರ್ಪಡೆಗೊಳ್ಳಬೇಕು. ಒಕ್ಕೂಟದಿಂದ ದೊರೆಯುವ ಸಾಲ, ಅನುದಾನ ಹಾಗೂ ಇತರ ಸೌಲಭ್ಯಗಳನ್ನು ಸಂಘದ ಮಹಿಳೆಯರು ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ವಿನಾಯಕ, ಡಾ.ಭರತ್ ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಮುತ್ತಿನಕೊಪ್ಪ ಗ್ರಾಪಂ ಸದಸ್ಯರಾದ ಕೀರ್ತಿ, ಪುಷ್ಪಾ ಪ್ರವೀಣ್ , ಪಯಾಜ್, ಪಿಡಿಒ ಸುಮಿತ್ರ, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಧನಲಕ್ಷ್ಮೀ, ಒಕ್ಕೂಟದ ಖಜಾಂಚಿ ಉಷಾ, ವಲಯ ಮೇಲ್ವೀಚಾರಕ ಚೇತನ್, ಪವಿತ್ರ, ಮಮತ, ಮಂಜುಳಾ ಇದ್ದರು.