

ವಿಜಯಪುರ : ಪರಿಸರ, ಪ್ರಾಚಿನ ಸ್ಮಾರಕಗಳ ಸಂರಣೆ ಹಾಗೂ ಪ್ರವಾಸೋದ್ಯಮ ಕುರಿತ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದಲ್ಲಿ ಡಿ. 22 ರಂದು ನಡೆಯಲಿರುವ ವೃಕ್ಷೋಥಾನ್ ಹೆರಿಟೇಜ್ ರನ್&2024ಕ್ಕೆ ನಿರೀೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದ್ದು, ನಗರದ ಮೂರು ಜನ ಗಣ್ಯರು ಪ್ರಾಯೋಜಕತ್ವಕ್ಕಾಗಿ ಆರ್ಥಿಕ ನೆರವು ನೀಡಿದ್ದಾರೆ.
ಕಾಂಗ್ರೆಸ್ ಮುಖಂಡ ಅಬ್ದುಲ ಹಮೀದ ಮುಶ್ರಿಫ್, ಖ್ಯಾತ ಉದ್ಯಮಿ ಜೆ.ಜಿ. ಪಾರೇಖ, ಗಣ್ಯ ವ್ಯಾಪಾರಸ್ಥ ಶರಣು ಗುಡ್ಡೊಡಗಿ ಆರ್ಥಿಕ ನೆರವು ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.