

ಎನ್.ಆರ್.ಪುರ: ಸ್ತ್ರೀ ಶಕ್ತಿ ಸಂಘಗಳಿಗೆ ಆರ್ಥಿಕ ಸ್ವಾವಲಂಬನೆ ನೀಡಬೇಕು ಎಂಬುವುದು ಸಂಜೀವಿನಿ ಒಕ್ಕೂಟದ ಮುಖ್ಯ ಉದ್ದೇಶ ಎಂದು ಸಂಜೀವಿನಿ ಒಕ್ಕೂಟದ ಕಾರ್ಯಕ್ರಮ ವ್ಯವಸ್ಥಾಪಕ ಸುಬ್ರಹ್ಮಣ್ಯ ತಿಳಿಸಿದರು.
ಗುಬ್ಬಿಗಾ ಗಣಪತಿ ಪೆಂಡಾಲ್‌ನಲ್ಲಿ ಗುಬ್ಬಿಗಾ ಗ್ರಾಪಂ ಮಟ್ಟದ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಪ್ರತಿ ಗ್ರಾಪಂಗೆ ಒಂದರಂತೆ ತಾಲೂಕಿನಲ್ಲಿ 14 ಸಂಜೀವಿನಿ ಒಕ್ಕೂಟಗಳಿವೆ. ಸರ್ಕಾರ ಪ್ರತಿ ವರ್ಷ ಸಂಜೀವಿನಿ ಒಕ್ಕೂಟಗಳಿಗೆ ಲಕ್ಷಾಂತರ ರೂ. ಬಿಡುಗಡೆ ಮಾಡುತ್ತದೆ. ಪ್ರತಿ ತಿಂಗಳು ಮಾಸಿಕ ಸಭೆ ನಡೆಯಲಿದ್ದು ಸದಸ್ಯರು ಮಾಸಿಕ ಸಭೆಗೆ ಬಂದರೆ ಹೆಚ್ಚಿನ ಮಾಹಿತಿ ತಿಳಿಯಲಿದೆ. ಗುಬ್ಬಿಗಾ ಸಂಜೀವಿನಿ ಒಕ್ಕೂಟದಲ್ಲಿ 32 ಸ್ವಸಹಾಯ ಸಂಘಗಳಿವೆ. ಗ್ರಾಮ ಪಂ ವ್ಯಾಪ್ತಿಯ ಎಲ್ಲ ಮಹಿಳೆಯರು ಎನ್‌ಆರ್‌ಎಲ್‌ಎಂ ವ್ಯಾಪ್ತಿಗೆ ಬಬೇಕು. ಗುಬ್ಬಿಗಾ ಸಂಜೀವಿನಿ ಒಕ್ಕೂಟ ಮುಂದಿನ ವರ್ಷದಲ್ಲಿ ಕನಿಷ್ಠ 50 ಸ್ವಸಹಾಯ ಗುಂಪುಗಳನ್ನು ಹೊಂದಿರಬೇಕು ಎಂದರು.
ಗುಬ್ಬಿಗಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಧನಲಕ್ಷ್ಮೀ, ಗುಬ್ಬಿಗಾ ಗ್ರಾಪಂ ಅಧ್ಯಕ್ಷೆ ನಾಗರತ್ನ, ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್,ಪಿಡಿಒ ಸೀಮಾ, ಕಾರ್ಯದರ್ಶಿ ಶೈಲಾ, ಖಜಾಂಚಿ ಶ್ರೀದೇವಿ, ವಲಯ ಮೇಲ್ವೀಚಾರಕ ಚೇತನ್, ವಿನೂತ, ಕವನ, ಶಿಬಿಮರಿಯಮ್ಮ, ಅರುಣಾಕ್ಷಿ, ಹರಿಣಾಕ್ಷಿ, ಹೇಮಾವತಿ, ಕೃಷಿ ಸಖಿ ಹರಿಣಾಕ್ಷಿ, ಅನಿತಾ ಇದ್ದರು.