ಬೇಲೂರು ಗ್ರಾಪಂನಲ್ಲಿ ಹಣ ದುರುಪಯೋಗ: ತಾಪಂ ಇಒಗೆ ದೂರು ಸಲ್ಲಿಸಿದ ಸದಸ್ಯರು

Financial misappropriation Members complaint to Taluk Panchayat EO Mandya
Published on

ಮಂಡ್ಯ: ತಾಲೂಕಿನ ಬೇಲೂರು ಗ್ರಾಮ ಪಂಚಾಯಿತಿಯಲ್ಲಿ ಹಣ ದುರುಪಯೋಗವಾಗಿದ್ದು, ಈ ಬಗ್ಗೆ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಗ್ರಾಪಂ ಸದಸ್ಯರು ಮತ್ತು ಗ್ರಾಮಸ್ಥರು ತಾಲೂಕು ಪಂಚಾಯಿತಿ ಇಒ ವೀಣಾ ಅವರಿಗೆ ನಗರದಲ್ಲಿ ದೂರು ನೀಡಿದರು.

15ನೇ ಹಣಕಾಸಿನ ಯೋಜನೆಯಡಿ ಅನುಮೋದನೆಯಾಗಿರುವ ಕ್ರಿಯಾ ಯೋಜನೆಯ ಕಾಮಗಾರಿಗಳ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಕೆಲ ಗ್ರಾಮಗಳಲ್ಲಿ ಕಾಮಗಾರಿಯನ್ನು ಮಾಡುತ್ತೇವೆ ಎಂಬುದನ್ನು ತಿಳಿಸಿ ಕೇವಲ ಕ್ರಿಯಾಯೋಜನೆ ರೂಪಿಸಿ ಅದರಲ್ಲಿಯೂ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಕಾಮಗಾರಿ ನಡೆದಿರುವ ಬಗ್ಗೆ ಬಿಲ್ ಕೇಳಿದರು ಸಹ ನೀಡಿಲ್ಲ. ನಿಯಮ ಬಾಹಿರವಾಗಿ ಸಾಮಾಗ್ರಿಗಳನ್ನು ಖರೀದಿಸಿ ಅದರಲ್ಲಿಯೂ ಲೋಪವೆಸಗಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು.

ಯಾವುದೇ ದರ ಪಟ್ಟಿಯನ್ನು ಪಡೆಯದೇ ಬಿಲ್ ಮತ್ತು ಓಚರ್, ಡಿಸಿ ರಿಜಿಸ್ಟರ್ ದಾಖಲೆಗಳಿಲ್ಲದೇ ದೊಡ್ಡ ಮಟ್ಟದಲ್ಲಿ ಸಾರ್ವಜನಿಕರ ಹಣ ಅವ್ಯವಹಾರ ನಡೆಸಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಪಟ್ಟಂತೆ ಗ್ರಾ.ಪಂ ಅಧ್ಯಕ್ಷ ಹಾಗೂ ಪಿಡಿಒ ಮೇಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸದಸ್ಯರಾದ ದಯಾನಂದ, ಮಮತಾ, ಶ್ರುತಿ, ಮಂಗಳಾ, ಸೌಮ್ಯಾ, ಹರೀಶ್, ಮಂಜುಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net