

ಕೋಟ: ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರು, ಆರ್ಥಿಕ ಸಾಕ್ಷರತಾ ಕೇಂದ್ರ-ಉಡುಪಿ ಮದರ್ ಸಂಸ್ಥೆ, ರುಡ್‌ಸೆಟ್-ಬ್ರಹ್ಮಾವರ, ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ಮತ್ತು ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ಆಯೋಜಿಸಿರುವ ಹಣಕಾಸು ಸಾಕ್ಷರತ ಸಪ್ತಾಹ ಇತ್ತೀಚೆಗೆ ಸಾಸ್ತಾನದಲ್ಲಿ ನಡೆಯಿತು.
ಹಣಕಾಸು ಸಾಕ್ಷರತೆ ಮತ್ತು ಮಹಿಳೆಯರ ಸಮೃದ್ಧಿ ಅಂದರೆ ಮನೆ ಬಜೆಟ್, ಖಾತೆ ತೆರೆಯುವಿಕೆ, ಸೂಕ್ಷ್ಮ ಉಳಿತಾಯ, ಉಳಿತಾಯ ಮತ್ತು ಅಪಾಯ ನಿರ್ವಹಣೆ, ಮಾಸಿಕ ಉಳಿತಾಯ, ತುರ್ತು ಯೋಜನೆ ಬೆಳವಣಿಗೆಗೆ ಸಾಲ ಪಡೆಯುವುದು, ಉತ್ತಮ ಕ್ರೆಡಿಟ್ ಸ್ಕೋರ್ ನಿರ್ವಹಿಸುವುದು, ನಿಯಂತ್ರಿತ ಘಟಕಗಳಿಂದ ಕ್ರೆಡಿಟ್ ಪಡೆಯುವುದು, ಜವಾಬ್ದಾರಿಯುತ ಸಾಲ, ಸಾಮಾಜಿಕ ಭದ್ರತಾ ಯೋಜನೆ ಇತ್ಯಾದಿ ವಿಚಾರಗಳ ಬಗ್ಗೆ ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಹರೀಶ್ ಜಿ. ಅವರೊಂದಿಗೆ ಚರ್ಚಿಸಿ ಮಾಹಿತಿ ಪಡೆಯಲಾಯಿತು.
ಮಾಹಿತಿ ಆಧಾರಿತ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಉಡುಪಿ ಆಪ್ತ ಸಮಾಲೋಚಕಿ ಮೀರಾ, ರುಡ್‌ಸೆಟ್ ಬ್ರಹ್ಮಾವರ ನಿರ್ದೇಶಕ ಲಕ್ಷ್ಮೀಶ್, ಕೆನರಾ ಬ್ಯಾಂಕ್ ಸಾಸ್ತಾನ ಶಾಖೆ ಪ್ರಧಾನ ವ್ಯವಸ್ಥಾಪಕ ಪ್ರಜಿನ್ ಟಿ.ಯು., ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿರ್ದೇಶಕ ಸುದಿನ ಕೋಡಿ ಉಪಸ್ಥಿತರಿದ್ದರು. ಉಡುಪಿ ಆರ್ಥಿಕ ಸಾಕ್ಷರತಾ ಕೇಂದ್ರ ಮದರ್ ಸಂಸ್ಥೆ ತಂಡ ಸಂಯೋಜಕಿ ಅರ್ಪಿತಾ ಬ್ರಹ್ಮಾವರ ನಿರೂಪಿಸಿದರು.