

ಚಿತ್ರದುರ್ಗ: ಪ್ರತಿಯೊಬ್ಬ ವ್ಯಕ್ತಿಗೂ ಆರ್ಥಿಕ ಸಾಕ್ಷರತೆಯ ಅಗತ್ಯವಿದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ಎಸ್‌ಬಿಐ ಆರ್ಥಿಕ ಸಾಕ್ಷರತಾ ಕೇಂದ್ರ ಸಿಬ್ಬಂದಿ ವರ್ಗದವರಿಗೆ ನಗರದ ಡಯಟ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಆರ್ಥಿಕ ಸಾಕ್ಷರತಾ ಮಾಹಿತಿ ಕಾರ‌್ಯಾಗಾರ ದಲ್ಲಿ ಮಾತನಾಡಿ, ಓದು-ಬರಹದ ಜತೆಗೆ ಆರ್ಥಿಕ ಜ್ಞಾನವೂ ಅಗತ್ಯವಿದೆ ಎಂದರು.
ಜಿಲ್ಲಾ ಆರ್ಥಿಕ ಸಾಕ್ಷರತಾ ಕೇಂದ್ರದ ಮಾರ್ಗದರ್ಶಿ ಸಂಪನ್ಮೂಲ ವ್ಯಕ್ತಿ ಮಧುಸೂದನ್ ಮಾತನಾಡಿ, ಆರ್ಥಿಕ ಜ್ಞಾನವಿಲ್ಲದಿದ್ದರೆ ಅಸಮತೋಲಿತ ಜೀವನ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಿರಿಯ ಉಪನ್ಯಾಸಕರಾದ ಡಿ.ಆರ್.ಕೃಷ್ಣಮೂರ್ತಿ, ಇ.ಹಾಲಮೂರ್ತಿ, ಎಸ್.ಸಿ.ಪ್ರಸಾದ್, ಉಪನ್ಯಾಸಕರಾದ ಆರ್.ನಾಗರಾಜು, ಎಸ್.ಬಸವರಾಜು, ಯು.ಸಿದ್ದೇಶಿ, ಕೆ.ಜಿ.ಪ್ರಶಾಂತ್, ಜಿ.ಎಸ್.ನಾಗರಾಜು, ಬಿ.ಎಸ್.ನಿತ್ಯಾನಂದ ಇದ್ದರು.