ಓದು ಜತೆಗೆ ಇರಲಿ ಆರ್ಥಿಕ ಜ್ಞಾನ

K HALLI SAKSHARATHE 15 (2)
Published on

ಕೊಂಡ್ಲಹಳ್ಳಿ: ಓದು, ಆಟದ ಜತೆಗೆ ಆರ್ಥಿಕ ಜ್ಞಾನ ಬಹಳ ಮುಖ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಜಿಪಂ ಎನ್‌ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕ ಭೋಜರಾಜು ತಿಳಿಸಿದರು.

ಗ್ರಾಮದಲ್ಲಿ ಕೇಂದ್ರ ಅರ್ಥಿಕ ಸಾಕ್ಷರತೆ ಮತ್ತು ಸೇವಾ ವಿತರಣಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು ಹಣವನ್ನು ಗಳಿಕೆ ಹಾಗೂ ಸದ್ಬಳಕೆ ಹೇಗೆ ಎಂಬ ಕುರಿತು ಹೆಚ್ಚು ಗಮನಹರಿಸಬೇಕು ಎಂದರು.

ಸಕ್ಷಮ್ ಕೇಂದ್ರವನ್ನು ಗ್ರಾಪಂ ಅಧ್ಯಕ್ಷೆ ಎಂ.ಎಲ್.ಪವಿತ್ರಾ ಉದ್ಘಾಟಿಸಿದರು. ಅನ್ನಪೂರ್ಣೇಶ್ವರಿ ಒಕ್ಕೂಟದ ಅಧ್ಯಕ್ಷೆ ಟಿ.ಶೋಭಾ, ತಾಲೂಕು ಕಾರ್ಯನಿರ್ವಾಹಕ ವ್ಯವಸ್ಥಾಪಕ ಜಿ.ಶಿವಣ್ಣನಾಯ್ಕ, ವಲಯ ಮೇಲ್ವಿಚಾರಕ ಅನಿಲ್‌ಕುಮಾರ್, ಒಕ್ಕೂಟದ ಪದಾಧಿಕಾರಿಗಳಾದ ರೋಜಾ, ದೇವೀರಮ್ಮ ರೋಜಾ, ಮಮತಾ, ನಿರ್ಮಲಾ, ಲಕ್ಷ್ಮೀ, ಸುಮಿತ್ರಾ, ಜ್ಯೋತಿ, ರೂಪಾ ಇದ್ದರು.

ಅನ್ನಪೂಣೇಶ್ವರಿ ಸಂಜೀವಿನಿ, ಜಿಪಂ, ತಾಲೂಕು ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net