ಸಂಜೀವಿನಿ ಒಕ್ಕೂಟದಿಂದ ಆರ್ಥಿಕ ಪ್ರಾಬಲ್ಯ

MDG meet
ಂತೂರು ಗ್ರಾಪಂನಲ್ಲಿ ಮಂಗಳವಾರ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ.
Published on

ಮೂಡಿಗೆರೆ: ಸಂಜೀವಿನಿ ಒಕ್ಕೂಟಗಳು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವಲ್ಲಿ ಯಶಸ್ವಿಯಾಗಿವೆ ಎಂದು ಒಕ್ಕೂಟದ ಜಿಲ್ಲಾ ವ್ಯವಸ್ಥಾಪಕ ರಾಜೇಂದ್ರ ಹೇಳಿದರು.

ಹಂತೂರು ಗ್ರಾಪಂನಲ್ಲಿ ಮಂಗಳವಾರ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಮಹಿಳೆಯರ ಕೌಶಲ ಅಭಿವೃದ್ಧಿಗೊಳಿಸಿ ಅವರನ್ನು ಆರ್ಥಿಕವಾಗಿ ಪ್ರಗತಿಶೀಲರನ್ನಾಗಿಸುವ ಸಲುವಾಗಿ ರಾಜ್ಯದಲ್ಲೆಡೆ ಸಂಜೀವಿನಿ ಒಕ್ಕೂಟಗಳನ್ನು ರಚಿಸಲಾಗಿದೆ. ಗ್ರಾಪಂ ಮಟ್ಟದಲ್ಲಿ ಸ್ವಸಹಾಯ ಸಂಘಗಳ ಸಂಜೀವಿನಿ ಒಕ್ಕೂಟದ ಮೂಲಕ ಕಿರು ಉದ್ಯಮಗಳನ್ನು ನಡೆಸುವುದಲ್ಲದೆ ಮಹಿಳೆಯರು ಕಿರು ಕೈಗಾರಿಕೆ ಮೂಲಕ ಉತ್ಪಾದಿಸುವ ವಸ್ತುಗಳಿಗೆ ಮಾರುಕಟ್ಟೆ ಒದಗಿಸಿ ಕೊಡುವ ಕೆಲಸವನ್ನು ಸಂಜೀವಿನಿ ಒಕ್ಕೂಟ ನಿರಂತರವಾಗಿ ಮಾಡುತ್ತಿವೆ ಎಂದು ತಿಳಿಸಿದರು.
ಹಂತೂರು ಗ್ರಾಪಂ ಸದಸ್ಯ ಕಣಚೂರು ವಿನೋದ್ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಪ್ರಗತಿ ಸಾಧಿಸಿದರೆ ಅವರ ಕುಟುಂಬ ಪ್ರಗತಿಯತ್ತ ಸಾಗುತ್ತದೆ. ಯಾವುದೇ ಉದ್ದಿಮೆ ಯಶಸ್ಸಿಗೆ ಆರ್ಥಿಕ ಶಿಸ್ತು ಮುಖ್ಯವಾಗಿದೆ ಎಂದರು.
ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಎಸ್.ಆರ್.ಭಾಗೀರಥಿ, ಹಂತೂರು ಗ್ರಾಮ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ವಿನೋದ್, ಶೈಲಾ, ಅಂಬಿಕಾ, ಅಬ್ದುಲ್ ನಾಜಿಮ್, ಅಭಿಜಿತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net