

ಮುಂಡರಗಿ: ವಿದ್ಯುತ್ ದರ ಏರಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಸರ್ವ ವ್ಯಾಪಾರಸ್ಥರ ಸಂಘದ ವತಿಯಿಂದ ಗುರುವಾರ ಪಟ್ಟಣದ ಬಹುತೇಕ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಅಂಬಾ ಭವಾನಿ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ವಿದ್ಯುತ್ ಬೆಲೆ ಹೆಚ್ಚಳದಿಂದ ಅಂಗಡಿಗಳ ನಿರ್ವಹಣೆ ವೆಚ್ಚ ಹೆಚ್ಚಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಿಸುತ್ತದೆ. ಸ್ಥಿರ ಆದಾಯದ ಮಧ್ಯಮ ವರ್ಗದ ಉದ್ಯೋಗಿಗಳಿಗೆ, ದರ ಹೆಚ್ಚಳವು ಆರ್ಥಿಕ ಹೊರೆಯನ್ನುಂಟು ಮಾಡುತ್ತದೆ.
ಸರ್ಕಾರ ಮಧ್ಯ ಪ್ರವೇಶಿಸಿ ವಿದ್ಯುತ್ ದರ ಇಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಗ್ರೇಡ್-೨ ತಹಸೀಲ್ದಾರ್ ಕೆ.ರಾಧಾ ಮನವಿ ಸ್ವೀಕರಿಸಿದರು. ಸರ್ವ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪ್ರಕಾಶ ಕಾಲವಾಡ, ಉಪಾಧ್ಯಕ್ಷ ಅಶೋಕ ಶಿದ್ಲಿಂಗ್, ಪ್ರಧಾನ ಕಾರ್ಯದರ್ಶಿ ವಿಠ್ಠಲ ಗಣಾಚಾರಿ, ಖಜಾಂಚಿ ಅಶೋಕ ಅಂಗಡಿ, ನಾಗೇಶ ಹುಬ್ಬಳ್ಳಿ, ಕೊಟ್ರೇಶ ಅಂಗಡಿ, ವೀರಣ್ಣ ಬೇವಿನಮರದ, ಗೌತಮಚಂದ್ ಚೋಪ್ರಾ, ಫಣಿರಾಜ ಅಳವಂಡಿ, ನಾಗರಾಜ ಮುಖ್ಯೆ, ವೆಂಕಟೇಶ ಹೆಗ್ಗಡಾಳ, ಸುರೇಶ ಜೈನ, ಅಮೀನಸಾಬ್ ಬಿಸನಳ್ಳಿ, ರಾಘವೇಂದ್ರ ಹೆಗ್ಗಡಾಳ, ಮಂಜುನಾಥ ಕಾಲವಾಡ, ರಾಜು ಸೋನಿ, ವಿಜಯ ಕೊಪ್ಪಳ, ದೇವು ಹಡಪದ, ಗಣೇಶ ಮಗಜಿ, ಅನಂತ ಚಿತ್ರಗಾರ, ಸುರೇಶ ಬಾರಿಗಿಡದ, ಬಾಲಾಜಿ, ಮರಿಯಪ್ಪ ರಾಮೇನಹಳ್ಳಿ, ಪರುಶುರಾಮ ಮಹೇಂದ್ರಕರ, ಇತರರು ಇದ್ದರು.