ವಿದ್ಯಾರ್ಥಿನಿ ಶಿಕ್ಷಣಕ್ಕೆ ಆರ್ಥಿಕ ನೆರವು: ಮದ್ದೂರಿನ ಧ್ವನಿ ಸಂಸ್ಥೆಯಿಂದ ಮಾದರಿ ಸೇವೆ

Financial assistance to the student mandya
Published on

ಮಂಡ್ಯ: ನಗರದ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಆರ್.ಮನಿಷಾಗೆ ಮದ್ದೂರಿನ ಧ್ವನಿ ಸಂಸ್ಥೆಯಿಂದ ಆರ್ಥಿಕ ನೆರವು ನೀಡಲಾಯಿತು.

ಸಂಸ್ಥೆ ಅಧ್ಯಕ್ಷೆ ರಜಿನಿರಾಜ್ ಮಾತನಾಡಿ, ವಿದ್ಯಾರ್ಥಿನಿಯ ಶೈಕ್ಷಣಿಕ ವೆಚ್ಚದ ಆರ್ಥಿಕ ನೆರವಿಗಾಗಿ ಮಕ್ಕಳ ಸಹಾಯವಾಣಿ ಘಟಕದಿಂದ ನಮ್ಮ ಸಂಸ್ಥೆಗೆ ಮಾಹಿತಿ ನೀಡಲಾಗಿತ್ತು. ವಿದ್ಯಾರ್ಥಿನಿಯ ಪಾಲಕರು ಬಡವರಾಗಿದ್ದು, ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ 7,500 ರೂಗಳನ್ನು ನೀಡಿ ಪ್ರೋತ್ಸಾಹ ನೀಡಲಾಗಿದೆ ಎಂದರು.

1098 ಸಹಾಯವಾಣಿಯ ಕಾರ್ಯಕ್ರಮ ಸಂಯೋಜಕಿ ಶೋಭಾವತಿ, ಸಂಸ್ಥೆ ಸದಸ್ಯರಾದ ಉಜ್ವಲ ಶ್ರೀಧರ್, ವರಲಕ್ಷ್ಮೀ, ಶಿಕ್ಷಕ ಭೈರಪ್ಪ, ರಾಜಶೇಖರ್, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಾಜೇಂದ್ರ, ಆಪ್ತ ಸಮಾಲೋಚಕಿ ರಶ್ಮಿ, ಮೇಲ್ವಿಚಾರಕ ಲಕ್ಷ್ಮೀಶ್‌ಗೌಡ, ವಿಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net