

ಕೆರೂರ: ಆಕಸ್ಮಿಕ ಬೆಂಕಿ ಅವಘಡದಲ್ಲಿ ಮೃತಪಟ್ಟ ಪಟ್ಟಣದ ವಿನಾಯಕ ತಿಪ್ಪಣ್ಣ ಗಡೇದ ಅವರ ಮನೆಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭೇಟಿ ನೀಡಿ ಧನಸಹಾಯ ನೀಡಿ ಸಾಂತ್ವನ ಹೇಳಿದರು.
ಹೊಸಪೇಟೆ ಬಡಾವಣೆಯ ಪೆಂಡಾರಿ ಓಣಿಯ ವಿನಾಯಕ(18) ಚಹಾ ಕಾಯಿಸುವ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರು ಭೇಟಿ ನೀಡಿ ಮೃತನ ಕುಟುಂಬದವರಿಗೆ ವೈಯಕ್ತಿಕವಾಗಿ 50,000 ರೂ. ನೀಡಿದರು.
ಡಾ.ಎಂ.ಜಿ. ಕಿತ್ತಲೆ, ಪ.ಪಂ. ಸದಸ್ಯರಾದ ವಿಠ್ಠಲಗೌಡ ಗೌಡರ, ಯಾಸೀನ್ ಖಾಜಿ, ಮಲ್ಲು ಹಡಪದ, ಬಸವರಾಜ ಹರಣಶಿಕಾರಿ, ಮುಖಂಡರಾದ ಮಂಜುನಾಥ ತಿಮ್ಮಾಪೂರ, ಕಂಠೇಶ ಕತ್ತಿ, ಶಂಕ್ರಪ್ಪ ಗದಗಿನ, ಸುರೇಶ ಪೂಜಾರಿ ಇತರರಿದ್ದರು.