

ರಾಯಚೂರು: ಮೀನುಗಾರಿಕೆಯಿಂದ ರೈತರಿಗೆ ನಿರಂತರ ಉದ್ಯೋಗ ದೊರೆಯುವುದರ ಜತೆಗೆ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ ಎಂದು ಬೀದರನ ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ವಿಜ್ಞಾನಗಳ ವಿವಿ ಕುಲಪತಿ ಡಾ.ಕೆ.ಸಿ.ವೀರಣ್ಣ ಹೇಳಿದರು.
ಸ್ಥಳೀಯ ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮತ್ಸ ಸಂಪದ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಯಚೂರು, ಯಾದಗಿರಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಅಪೌಷ್ಠಿತೆ ಹೆಚ್ಚಾಗಿದ್ದು, ಮೀನು ಸೇವನೆಯಿಂದ ಮಕ್ಕಳಲ್ಲಿ ಬುದ್ದಿಶಕ್ತಿ ಬೆಳವಣಿಗೆ, ಪ್ರೋಟೀನ್ ಹೆಚ್ಚಾಗಿ ಸಿಗುತ್ತದೆ ಎಂದರು.
ರಾಷ್ಟ್ರೀಯ ಆಹಾರ ಭದ್ರತೆ, ಪೌಷ್ಠಿಕ ಆಹಾರದ ಭದ್ರತೆ ಸೇರಿದಂತೆ ರೈತರ ಅಭಿವೃದ್ಧಿಗೆ ವಿವಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆ ಮೂಲಕ ಮೀನುಗಾರಿಕೆ ಮಾರಾಟ, ರ್ತು, ಉತ್ಪಾದನಾ ಘಟಕಗಳನ್ನು ಸರಪಳಿ ಮಾದರಿಯಲ್ಲಿ ಜನರಿಗೆ ನೀಡಲಾಗುತ್ತಿದೆ.
ಮತ್ಸ ಸಂಪದ ಯೋಜನೆಯಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಕೇಂದ್ರ ಸರ್ಕಾರ 2021-23ನೇ ಸಾಲಿನಲ್ಲಿ ಯೋಜನೆಗೆ 2,050 ಕೋಟಿ ರೂ. ಮೀಸಲಿಟ್ಟಿತ್ತು. ರೈತಾಪಿ ವರ್ಗದ ಜನರು ಯೋಜನೆ ಮಾಹಿತಿ ಪಡೆದುಕೊಳ್ಳುವ ಮೂಲಕ ಆರ್ಥಿಕ ಹಾಗೂ ಸಾಮಾಜಿಕ ಬದುಕನ್ನು ಉತ್ತಮ ಪಡಿಸಿಕೊಳ್ಳಬಹುದಾಗಿದೆ ಎಂದು ಕೆ.ಸಿ.ವೀರಣ್ಣ ಹೇಳಿದರು.
ಕಾರ್ಯಕ್ರಮದಲ್ಲಿ ಹೈದರಾಬಾದ್‌ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಕಾರಿ ಡಾ.ಎಲ್.ನರಸಿಂಹಮೂರ್ತಿ, ಮಂಗಳೂರು ಮೀನುಗಾರಿಕೆ ವಿದ್ಯಾಲಯದ ಮುಖ್ಯಸ್ಥ ಡಾ.ಎಚ್.ಎನ್.ಆಂಜಿನೇಯಪ್ಪ, ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಎಸ್.ಬಿ.ಗೌಡಪ್ಪ, ಹಣಕಾಸು ನಿಯಂತ್ರಣಾಕಾರಿ ಡಾ.ಪ್ರಮೋದ ಕಟ್ಟಿ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಗುರುರಾಜ ಸುಂಕದ, ಡಾ.ನೇಮಿಚಂದ್ರಪ್ಪ, ಡಾ.ಷಡಾಕ್ಷರಿ ಉಪಸ್ಥಿತರಿದ್ದರು.