ದೇಹದಾಡ್ಯಪಟು ಗಣೇಶ್‌ಗೆ ಆರ್ಥಿಕ ನೆರವು

MDK05
Published on

ಮಡಿಕೇರಿ: ಚೆನ್ನೈನಲ್ಲಿ ಆಯೋಜಿತ ಐಕಾನ್ ಇಂಡಿಯಾ ದೇಹದಾಡ್ಯ ಸ್ಪರ್ಧೆಗೆ ತೆರಳುತ್ತಿರುವ ಮಡಿಕೇರಿಯ ದೇಹದಾಡ್ಯಪಟು ಗಣೇಶ್‌ರವರಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.


ನಗರದ ರೋಟರಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿತ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್‌ರವರು ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರು ನೀಡಿದ ೨೦ ಸಾವಿರ ರೂಗಳನ್ನು ಗಣೇಶ್ ಅವರಿಗೆ ನೀಡಿ ಶುಭಹಾರೈಸಿದರು.


ಈ ಸಂದರ್ಭ ಮಾತನಾಡಿದ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕೌಟುಂಬಿಕ ಕಾರಣಗಳಿಂದಾಗಿ ಶಿಕ್ಷಣ ಮೊಟಕುಗೊಳಿಸಿ ಹೋಟೇಲ್ನಲ್ಲಿ ಉದ್ಯೋಗ ಕೈಗೊಂಡ ಗಣೇಶ್ ಪ್ರಾರಂಭದಲ್ಲಿ ಹವ್ಯಾಸವಾಗಿ ದೇಹದಾಡ್ಯತೆಯನ್ನು ಮೈಗೂಡಿಸಿಕೊಂಡರು. ಆದರೆ, ನಂತರ ಛಲದಿಂದ ದೇಹದಾಡ್ಯ ಪಟುವಾಗಿ ಹೊರಹೊಮ್ಮಿದರು. ಹೀಗಾಗಿಯೇ ಗಣೇಶ್ ಅವರು ಈವರೆಗೆ ಮಿಸ್ಟರ್ ದಕ್ಷಿಣ ಕನ್ನಡ, ಮಿಸ್ಟರ್ ಕರ್ನಾಟಕ ಮತ್ತು ಮಿಸ್ಟರ್ ಏಷ್ಯಾದಂಥ ಪ್ರತಿಷ್ಟಿತ ಪ್ರಶಸ್ತಿಗಳನ್ನು ದೇಹದಾಡ್ಯ ಸ್ಪರ್ಧೆಗಳಲ್ಲಿ ಪಡೆಯಲು ಸಾಧ್ಯವಾಗಿದೆ ಎಂದರು.


ಆ.೨೬ ರಂದು ಚೆನ್ನೈನಲ್ಲಿ ನಡೆಯುವ ಐಕಾನ್ ಇಂಡಿಯಾ ದೇಹದಾಡ್ಯ ಸ್ಪರ್ಧೆಗೆ ಕರ್ನಾಟಕದಿಂದ ಆಯ್ಕೆಯಾಗಿರುವ ಗಣೇಶ್ ಅಲ್ಲಿಯೂ ಸಾಧನೆ ಮಾಡಲಿ. ಗಣೇಶ್ ಅವರಿಗಿದ್ದ ಆರ್ಥಿಕ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಮಿಸ್ಟಿ ಹಿಲ್ಸ್ ಆರ್ಥಿಕವಾಗಿ ಗಣೇಶ್ ಅವರಿಗೆ ನೆರವಾಗುತ್ತಿದೆ ಎಂದು ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ರೋಟರಿ ವಲಯ ಸಹಾಯಕ ಗವರ್ನರ್ ದೇವಣಿರ ತಿಲಕ್, ಕಾರ್ಯದರ್ಶಿ ರತ್ನಾಕರ್ ರೈ, ನಿರ್ದೇಶಕ ಎಚ್.ಟಿ.ಅನಿಲ್ ವೇದಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net