ಮಹಾಮಂಡಳ ವತಿಯಿಂದ ಹಣಕಾಸಿನ ನೆರವು ಮೃತ ಯುವಕನ ಕುಟುಂಬಸ್ಥರಿಗೆ ಸಾಂತ್ವನ

Financial assistance from the Mahamandal consoles the family of the deceased youth
Published on

ವಿಜಯಪುರ : ನಗರದಲ್ಲಿ ಇತ್ತೀಚೆಗೆ ಗಣೇಶ ವಿಸರ್ಜನೆ ವೇಳೆ ವಿದ್ಯುತ್​ ಸ್ಪರ್ಶದಿಂದ ನಡೆದ ದುರ್ಟನೆಯಲ್ಲಿ ಮೃತಪಟ್ಟ ಡೋಬಳೆ ಗಲ್ಲಿಯ ಯುವಕ ಶುಭಂ ಸಂಕಪಾಳ ಅವರ ಮನೆಗೆ ಗಜಾನನ ಮಹಾ ಮಂಡಳಿಯ ಸಂಸ್ಥಾಪಕ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಮಹಾಮಂಡಳಿಯ ಪದಾಧಿಕಾರಿಗಳು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ, ಮಹಾಮಂಡಳದ ವತಿಯಿಂದ ಹಣಕಾಸಿನ ನೆರವು ನೀಡಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಏನೇ ಕಷ್ಟ ಇದ್ದರೂ ಗಜಾನನ ಮಹಾಮಂಡಳಕ್ಕೆ ತಿಳಿಸಲು ಮನವಿ ಮಾಡಿದರು. ಮಹಾಮಂಡಳ ಹಾಗೂ ಪದಾಧಿಕಾರಿಗಳು ಸದಾ ತಮ್ಮ ಕುಟುಂಬದ ಜತೆಗೆ ಇದ್ದು ಯಾವದೇ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.ಅಲ್ಲದೆ, ಗಾಯಗೊಂಡ ಯುವಕರ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಲಾಯಿತು. ಮರಾಠಾ ಸಮಾಜದ ಹಿರಿಯರಾದ ವಿಜಯ ಚವ್ಹಾಣ, ಪಾಲಿಕೆ ಸದಸ್ಯ ರಾಹುಲ್​ ಜಾಧವ ಮಾತನಾಡಿದರು. ಮಹಾಮಂಡಳದ ಮಡಿವಾಳಪ್ಪ ಸಜ್ಜನ, ರಾಜು ಹುನ್ನೂರ, ಈರಣ್ಣ ಪಟ್ಟಣಶೆಟ್ಟಿ ಮತ್ತಿತರರಿದ್ದರು.

ಗಣೇಶ ವಿಸರ್ಜನೆ ವೇಳೆ ವಿದ್ಯುತ್​ ಸ್ಪರ್ಶದಿಂದ ನಡೆದ ದುರ್ಟನೆಯಲ್ಲಿ ಮೃತಪಟ್ಟ ಡೋಬಳೆ ಗಲ್ಲಿಯ ಯುವಕ ಶುಭಂ ಸಂಕಪಾಳ ಅವರ ಮನೆಗೆ ಗಜಾನನ ಮಹಾಮಂಡಳಿಯ ಸದಸ್ಯರು ಭೇಟಿನೀಡಿ ಸಾಂತ್ವನ ಹೇಳಿದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಜಯ ಚವ್ಹಾಣ, ಈರಣ್ಣ ಪಟ್ಟಣಶೆಟ್ಟಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net