

ಗುರುಪುರ: ಮಂಗಳೂರು-ಮರಕಡದ ಎಜುಕಾರುಣ್ಯ ಚಾರಿಟೆಬಲ್ ಟ್ರಸ್ಟ್ ‘ವಿದ್ಯಾನಿಧಿ’ ಯೋಜನೆಯಡಿ ವಾಮಂಜೂರಿನ ಸೇಂಟ್ ರೇಮಂಡ್ಸ್ ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ತರಗತಿ ವಿದ್ಯಾರ್ಥಿ, ಕುಪ್ಪೆಪದವು ಅಟ್ಟೆಪದವಿನ ಬಡ ಕುಟುಂಬದ ನಿವಾಸಿ ಶಿವಾನಿ ಅವರಿಗೆ ನೀಡಲಾಗುವ ನೆರವಿನ ಚೆಕ್ಕನ್ನು ಶುಕ್ರವಾರ ಕುಪ್ಪೆಪದವು ಗ್ರಾಪಂ ಆವರಣದಲ್ಲಿ ಕುಪ್ಪೆಪದವು ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಡಿ.ಪಿ.ಹಮ್ಮಬ್ಬ ವಿದ್ಯಾರ್ಥಿನಿ ತಾಯಿ ವಿಮಲಾ ಅವರಿಗೆ ನೀಡಿದರು. ಕುಪ್ಪೆಪದವು ಗ್ರಾಪಂ ಉಪಾಧ್ಯಕ್ಷ ಶರೀಫ್ ಕಜೆ, ಉದ್ಯಮಿ ಜಗದೀಶ ಕುಲಾಲ್ ಪಾಕಜೆ, ರಾಜ್ಯ ರೈತ ಸಂಘದ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬ್ಳಗುತ್ತು, ಟ್ರಸ್ಟ್ ಅಧ್ಯಕ್ಷ ಮೋಹನದಾಸ್ ಮರಕಡ, ಪ್ರಧಾನ ಕಾರ್ಯದರ್ಶಿ ರಮೇಶ್ ಶೆಟ್ಟಿ, ಸ್ಥಳೀಯ ನಿವಾಸಿ ಭಾರತಿ, ಪತ್ರಕರ್ತ ಧನಂಜಯ ಗುರುಪುರ ಇದ್ದರು.