

ನಂದೇಶ್ವರ: ಕುಟುಂಬ ಸದಸ್ಯರು ಆಕಸ್ಮಿಕವಾಗಿ ಮರಣ ಹೊಂದಿದರೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಆರ್ಥಿಕ ನೆರವು ಒದಗಿಸಲಿದೆ ಎಂದು ಕೆನರಾ ಬ್ಯಾಂಕ್ ಶಾಖಾಧಿಕಾರಿ ವೆಂಕಣ್ಣ ಬಂಡಿ ಹೇಳಿದರು.
ಸಮೀಪದ ಸತ್ತಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಈಚೆಗೆ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ೨ ಲಕ್ಷ ರೂ. ಚೆಕ್ ಅನ್ನು ಈಚೆಗೆ ನಿಧನರಾದ ಗ್ರಾಮದ ಕೆಇಬಿ ನೌಕರ ಸುಭಾಷ ಬಳವಾಡ ಇವರ ಪತ್ನಿ ಶ್ರುತಿಗೆ ನೀಡಿ ಮಾತನಾಡಿ, ಪ್ರಧಾನಮಂತ್ರಿ ಜೀವನ ಜ್ಯೋತಿ ಯೋಜನೆಯು ಅತಿ ಕಡಿಮೆ ಪ್ರೀಮಿಯಂ ಹೊಂದಿದೆ. ಕೆನರಾ ಬ್ಯಾಂಕ್‌ನಲ್ಲಿ ಈ ಯೋಜನೆ ಸೌಲಭ್ಯವಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನವೀನ ಬಕಾರಿ, ವಿಲಾಸ ಪಾಧೆ, ಪೂರ್ವೇಶ ರಂಗಾರಿ, ನಿತಿನ್ ಎಚ್., ಮಹಾವೀರ ಜೀರಗಾಳ, ಪ್ರಕಾಶ ಜಗದೇವ, ನಿತಿನ್ ಯಳಮಲ್ಲೆ, ಪ್ರಕಾಶ ಮೂಡಸಿ, ಪ್ರಕಾಶ ಸಿಂಧೂರ, ಕುಮಾರ ಕವಲಗುಡ್ಡ ಇತರರಿದ್ದರು.