

ವಿಜಯವಾಣಿ ಸುದ್ದಿಜಾಲ ಉಡುಪಿ
ಹದಿನೇಳು ವರ್ಷದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಿರಂತರ ಯಕ್ಷಗಾನ ಕಲೆ ಕಲಿಸಿ ಪ್ರದರ್ಶನ ವ್ಯವಸ್ಥೆಗೊಳಿಸುತ್ತಿರುವ ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್ಗೆ ಮಂದಾರ್ತಿಯ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನವು ಪ್ರಸಾದ ರೂಪವಾಗಿ 2.50 ಲಕ್ಷ ರೂ. ಕೊಡುಗೆ ನೀಡಿದೆ.
ಕುಂದಾಪುರದ ಶಾಸಕ ಕಿರಣಕುಮಾರ್ ಕೊಡ್ಗಿ ಅವರ ಮನವಿಗೆ ಸ್ಪಂದಿಸಿದ ಐದು ಮೇಳ ಹೊಂದಿರುವ ಮಂದಾರ್ತಿ ದೇಗುಲದ ಅಧ್ಯಕ್ಷ
ಎಚ್.ಧನಂಜಯ್ ಶೆಟ್ಟಿ ಅವರು ಭಾನುವಾರ ಉಡುಪಿ ಟ್ರಸ್ಟ್ಗೆ ಹಸ್ತಾಂತರಿಸಿದರು.
ದೇವಳದ ಲೆಕ್ಕಪತ್ರ ವಿಭಾಗದ ಅಧಿಕಾರಿ ಶಂಭು ತಿಂಗಳಾಯ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್ ರಾವ್, ಯಕ್ಷ ಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿ ಮುರಲಿ ಕಡೆಕಾರ್, ವಿಶ್ವಸ್ಥರಾದ ನಾರಾಯಣ ಎಂ. ಹೆಗಡೆ, ಯು.ಎಸ್. ರಾಜಗೋಪಾಲ ಆಚಾರ್ಯ ಇದ್ದರು.