ಜೈನ ಸಮುದಾಯ ಭವನ ನಿರ್ಮಾಣಕ್ಕೆ ಧನ ಸಹಾಯ

cheque
Published on

ಕಲಘಟಗಿ: ತಾಲೂಕಿನ ತಬಕದಹೊನ್ನಿಹಳ್ಳಿ ವಲಯದ ದ್ಯಾಮಪುರ ಗ್ರಾಮದ ಶ್ರೀ 1008 ಶಾಂತಿನಾಥ ದಿಗಂಬರ ಜೈನ ಮಂದಿರದ ಸಮುದಾಯ ಭವನ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿರುವ 1 ಲಕ್ಷ ರೂ. ಮೊತ್ತದ ಡಿ.ಡಿ. ಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ ಅವರು ಹಸ್ತಾಂತರಿಸಿದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಪ್ರಭಾಕರ ನಾಯಕ, ತಾಲೂಕು ಯೋಜನಾಧಿಕಾರಿ ಪ್ರಶಾಂತ ನಾಯ್ಕ, ಕೆರೆ ವಿಭಾಗದ ಅಭಿಯಂತರ ನಿಂಗರಾಜ್, ಜೈನ ಮಂದಿರ ಟ್ರಸ್ಟ್ ಕಮಿಟಿ ಅಧ್ಯಕ್ಷ ಅನಂತಪ್ಪ ಮಾಳಗಿ, ವಲಯದ ಮೇಲ್ವಿಚಾರಕ ಜಯಕರ, ಜೈನ ಮಂದಿರದ ಪುರೋಹಿತ ಸೈನಿಕ ಉಪಾಧ್ಯಾಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net