

ಮಂಗಳೂರು: ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಮೈಕಲ್ ಡಿಸೋಜ ಮತ್ತು ಕುಟುಂಬದವರಿಂದ ಆರ್ಥಿಕ ನೆರವು ಗುರುವಾರ ವಿತರಿಸಲಾಯಿತು.
ಮಂಗಳೂರು ಬಿಷಪ್ ಡಾ.ಪೀಟರ್ ಪೌಲ್ ಸಲ್ದಾನ ಅವರು ಅಧ್ಯಕ್ಷತೆ ವಹಿಸಿ, ಸಾಂಕೇತಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಬಡ್ಡಿ ರಹಿತ ಸಾಲರೂಪದ ನೆರವನ್ನು ಹಸ್ತಾಂತರಿಸಿ, ಶುಭ ಹಾರೈಸಿದರು.
ಈ ಸಂದರ್ಭ ಮಾತನಾಡಿದ ಮೈಕಲ್ ಡಿಸೋಜ, ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆ ಹೋದ ಬಳಿಕ ಹೆತ್ತವರು ಹಾಗೂ ಸಮಾಜವನ್ನು ಮರೆಯಬಾರದು. ಸಮಾಜದಿಂದ ಪಡೆದ ಋಣವನ್ನು ಸಮಾಜಕ್ಕೆ ಅರ್ಪಿಸುವ ಕಡೆಗೆ ಒತ್ತು ನೀಡಬೇಕು ಎಂದರು.
ಫ್ಲಾವಿಯ ಡಿ ಸೋಜ, ಸಿಒಡಿಪಿ ಸಂಸ್ಥೆಯ ನಿರ್ದೇಶಕ ವಂ.ಫಾ.ವಿನ್ಸೆಂಟ್ ಡಿಸೋಜ ಮತ್ತು ಸಹ ನಿರ್ದೇಶಕ ವಂ. ಫಾ. ಲೊರೆನ್ಸ್ ಕುಟಿನ್ಹಾ ಉಪಸ್ಥಿತರಿದ್ದರು.
ಮಂಗಳೂರು ಧರ್ಮಪ್ರಾಂತ್ಯದ 103 ವಿದ್ಯಾರ್ಥಿಗಳಿಗೆ 86.60 ಲಕ್ಷ ರೂ. ಬಡ್ಡಿ ರಹಿತ ಸಾಲವನ್ನು ಬ್ಯಾಂಕಿನ ಮುಖಾಂತರ ವಿತರಿಸಲಾಗುತ್ತಿದೆ.