

ಕಡಬ: ಸದಸ್ಯರ ಸಾಂತ್ವನ ಯೋಜನೆಯಡಿ ಕ್ಯಾಂಪ್ಕೊ ಸಂಸ್ಥೆಯ ವತಿಯಿಂದ ಹೃದ್ರೋಗ ಚಿಕಿತ್ಸೆಗೆ ಆರ್ಥಿಕ ನೆರವು ಹಸ್ತಾಂತರ ಕಾರ್ಯಕ್ರಮ ಕ್ಯಾಂಪ್ಕೊ ಕಡಬ ಶಾಖಾ ಕಚೇರಿಯಲ್ಲಿ ನಡೆಯಿತು.
ಫಲಾನುಭವಿಗಳಾದ ಕಡಬ ಶಾಖೆಯ ಸದಸ್ಯರಾದ ನೋಣಪ್ಪ ಗೌಡ ಹಾಗೂ ಗೋಪಾಲಕೃಷ್ಣ ಡಿ. ಅವರ ಆ್ಯಂಜಿಯೋಪ್ಲಾಸ್ಟ್ ಚಿಕಿತ್ಸೆಗೆ ಕ್ಯಾಂಪ್ಕೋದಿಂದ ತಲಾ 50 ಸಾವಿರ ರೂ. ಮಂಜೂರುಗೊಂಡಿದ್ದು, ಇದರ ಚೆಕ್ಕನ್ನು ಕ್ಯಾಂಪ್ಕೊ ನಿರ್ದೇಶಕ ಕೃಷ್ಣಪ್ರಸಾದ ಮಡ್ತಿಲ ಹಸ್ತಾಂತರಿಸಿದರು.
ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರಘುಚಂದ್ರ ಮನೆಜಾಲು, ನೂಜಿಬಾಳ್ತಿಲ ಗ್ರಾ.ಪಂ ಸದಸ್ಯ ಇಮ್ಯಾನುವೆಲ್ ಪಿ.ಜೆ, ಪ್ರಮುಖರಾದ ಎಂ.ಕೃಷ್ಣ ಭಟ್ ಕನಕವನ, ಶಿವಪ್ಪ ಗೌಡ, ವಸಂತಿ ಉಪಸ್ಥಿತರಿದ್ದರು. ಕ್ಯಾಂಪ್ಕೊ ಸಂಸ್ಥೆಯ ಕಡಬ ಶಾಖಾ ಪ್ರಬಂಧಕ ಮಹೇಶ್ ಕೆ.ಎನ್. ಕುಂಟೋಡಿ ಸ್ವಾಗತಿಸಿ, ವಂದಿಸಿದರು.