

ವಿಜಯಪುರ: ನೀಟ್ ಪಾಸಾಗಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದರೂ ಸಹ ಶುಲ್ಕ ಭರಿಸಲಾಗದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ವಿದ್ಯಾರ್ಥಿನಿಗೆ ಬಿಎಲ್ಡಿಇ ಸಂಸ್ಥೆಯ ಅಧ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸಹಾಯ ಹಸ್ತ ಚಾಚುವ ಮೂಲಕ ಕೋರ್ಸಿನ ಸಂಪೂರ್ಣ ವೆಚ್ಚವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಭಾಗ್ಯಶ್ರೀ ದೇವರ ವಿದ್ಯಾರ್ಥಿನಿ ನೀಟ್ ಪರೀೆಯಲ್ಲಿ 49707 ರ್ಯಾಂಕ್ ಮೂಲಕ ಚಿಕ್ಕಬಳ್ಳಾಪುರ ಇನಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ವೈದ್ಯಕಿಯ ಸೀಟು ಪಡೆದಿದ್ದು, ವಿದ್ಯಾರ್ಥಿನಿಯ ಪಾಲಕರಿಗೆ ಸಂಸ್ಥೆಯ ವತಿಯಿಂದ ವೈದ್ಯಕಿಯ ಕೋರ್ಸಿನ ಮೊದಲ ವರ್ಷದ ಶೈಣಿಕ ಶುಲ್ಕ, ಹಾಸ್ಟೆಲ್ ಮತ್ತು ಊಟದ ಖರ್ಚಿಗೆ ಅಗತ್ಯವಿದ್ದ ಪ್ರಥಮ ಕಂತಿನ 1,57,250 ರೂ. ಗಳ ಚೆಕ್ನ್ನು ವಿಪ ಸದಸ್ಯ ಸುನೀಲಗೌಡ ಪಾಟೀಲ ಸೋಮವಾರ ವಿತರಿಸಿದರು. ವಿದ್ಯಾರ್ಥಿನಿಯ ತಂದೆ ಶಂಕರ ಮತ್ತು ತಾಯಿ ರಾಜೇಶ್ವರಿ ಜತೆಗಿದ್ದರು.
ಚೆಕ್ ವಿತರಿಸಿದ ಸುನೀಲಗೌಡ ಪಾಟೀಲ, ವಿದ್ಯಾರ್ಥಿನಿ ಭವಿಷ್ಯದಲ್ಲಿ ಉತ್ತಮ ವೈದ್ಯೆಯಾಗಿ ಹೆಸರು ಮಾಡಲಿ. ಅಲ್ಲದೆ, ಈ ಭಾಗದ ಬಡ ರೋಗಿಗಳ ಸೇವೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿನಿಯ ತಂದೆ ಶಂಕರ ದೇವರ ಮತ್ತು ತಾಯಿ ಜಯಶ್ರೀ ದೇವರ ಮಾತನಾಡಿ, ನಮ್ಮ ಮಗಳ ಕನಸು ನನಸು ಮಾಡಲು ಧನಸಹಾಯ ಮಾಡಿದ ಸಚಿವ ಎಂ.ಬಿ. ಪಾಟೀಲ ಮತ್ತು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲರ ಉಪಕಾರ ಎಂದೂ ಮರೆಯುವುದಿಲ್ಲ ಎಂದು ಹೇಳಿದರು.