ಹಣಕಾಸು ಸ್ಥಿತಿಗತಿ ಸುಧಾರಣೆಗೆ ಪಿಕೆಪಿಎಸ್‌ಗಳು ಪೂರಕ

4..2
ಅಂಕಲಿ ಪಿಕೆಪಿಎಸ್ ಸದಸ್ಯರಿಗೆ ಅಧ್ಯಕ್ಷ ಕಿರಣ ಕೋರೆ ಲಾಭಾಂಶ ವಿತರಿಸಿದರು. ಮಹಾಂತೇಶ ಡಂಗ, ಪಿಂಟು ಹಿರೇಕುರಬರ, ಗಿರೀಶ ಪಾಟೀಲ, ಚನ್ನಗೌಡ ಪಾಟೀಲ ಇತರರಿದ್ದರು.
Published on

ಮಾಂಜರಿ: ಗ್ರಾಮೀಣ ಬಡವರ ಅರ್ಥಿಕ ಪರಿಸ್ಥಿತಿ ಸುಧಾರಣೆಗೆ ಪಿಕೆಪಿಎಸ್ ಪೂರಕವಾಗಿದೆ ಎಂದು ಅಂಕಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕಿರಣ ಕೋರೆ ಹೇಳಿದರು.

ಸಮೀಪದ ಅಂಕಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಈಚೆಗೆ ಲಾಭಾಂಶ ವಿತರಿಸಿ ಮಾತನಾಡಿದರು. ಸಹಕಾರ ಸಂಘಗಳಲ್ಲಿ ಸುಲಭ ಸಾಲ ಸೌಲಭ್ಯ ಇರುತ್ತದೆ. ಇದು ಬಡವರಿಗೆ ಹೆಚ್ಚು ಅನುಕೂಲವಾಗಿರುತ್ತದೆ. ಬೀದಿಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಸ್ಥರು, ಬಡವರಿಗೆ ಸಾಲಸೌಲಭ್ಯ ಕಲ್ಪಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಸಂಘದ ಉಪಾಧ್ಯಕ್ಷ ಮಹಾಂತೇಶ ಡಂಗ, ನಿರ್ದೇಶಕ ಚನ್ನಗೌಡ ಪಾಟೀಲ, ಶಿವಗೌಡ ಪಾಟೀಲ, ಬಾಲಚಂದ್ರ ತಳಕೇರಿ, ಗಜಾನನ ಗುಡ್ಡಕಲೆ, ಪಿಂಟು ಹಿರೇಕುರುಬರ, ಅಶೋಕ ಶಿತೊಳೆ, ರಾಜು ಬುಬನಾಳೆ, ಸಂತೋಷ ಲೋಕರೆ, ಸಂತೋಷ ಮಗದುಮ್ಮ, ಗಿರೀಶ ಪಾಟೀಲ, ಅಪ್ಪಯ್ಯ ಖಟಾವೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net