

ಚನ್ನರಾಯಪಟ್ಟಣ : ಬಡವರಿಗೆ, ಕೂಲಿ ಕಾರ್ಮಿಕರಿಗೆ ಸಂಕಷ್ಟದ ವೇಳೆ ಹಣಕಾಸಿನ ನೆರವು ನೀಡಿ ಜೀವನ ನಿರ್ವಹಣೆಗೆ ಅರ್ಥಿಕ ಶಕ್ತಿ ಒದಗಿಸಿ ಎಂದು ತಹಸೀಲ್ದಾರ್ ಬಿ.ಎಂ.ಗೋವಿಂದ ರಾಜ್ ಹೇಳಿದರು.
ಪಟ್ಟಣದಲ್ಲಿನ ಗಣಪತಿ ಪೆಂಡಾಲಿನಲ್ಲಿ ಕರ್ನಾಟಕ ಮೈಕ್ರೋ ಫೈನಾನ್ಸ್ ಅಸೋಸಿಯೇಷನ್ ಇನ್‌ಸ್ಟಿಟ್ಯೂಷನ್ (ಆಕ್ಮಿ) ಅಯೋಜಿಸಿದ್ದ ಅರ್ಥಿಕ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿರು. ಡಿವೈಎಸ್ಪಿ ಪಿ.ರವಿಕುಮಾರ ಮಾತನಾಡಿ, ಮಹಿಳೆಯರ ಸಬಲಿಕರಣಕ್ಕಾಗಿ ಕರ್ನಾಟಕದಲ್ಲಿಯೂ 2002ರಲ್ಲಿ ಸ್ವಸಹಾಯ ಸಂಘಗಳನ್ನು ರಚಿಸಿ ಅರ್ಥಿಕ ಸಹಾಯ ನೀಡುವ ಯೋಜನೆ ಆರಂಭವಾಯಿತು. ಇದೀಗ ಸರ್ಕಾರದೊಂದಿಗೆ ಬ್ಯಾಂಕ್‌ಗಳು, ಖಾಸಗಿ ಫೈನಾನ್ಸ್‌ಗಳು ಸಾಲ ನೀಡುವ ಕೆಲಸ ಮಾಡುತ್ತಿವೆ. ಮೈಕ್ರೋ ಫೈನಾನ್ಸ್‌ಗಳಲ್ಲೂ ಕೆಲವು ಸಮಸ್ಯೆ ಇದೆ. ಅದನ್ನು ನಿವಾರಿಸಿಕೊಳ್ಳಬೇಕು ಎಂದರು. ಸಾಲ ಮಾಡಿ, ಅದನ್ನು ಕಟ್ಟಲಾಗದಾಗದೆ ಸಮಸ್ಯೆ ತಂದುಕೊಳ್ಳಬಾರದು ಎಂದು ಅವರು ಕಿವಿಮಾತು ಹೇಳಿದರು.
ಆಕ್ಮಿ ಸಿಇಒ ವಿ.ಎನ್. ಹೆಗ್ಡೆ ಮಾತನಾಡಿದರು. ನಬಾರ್ಡ್ ಡಿಎಂ ಮಾಲಿನಿ ಸುವರ್ಣ, ರುಡ್ ಸೆಟ್ ನಿರ್ದೆಶಕ ಸುಚಿತ್ರಕುಮಾರ್, ಹಣಕಾಸು ಸಾಕ್ಷರತೆ ವಿಭಾಗದ ಮುಖ್ಯಸ್ಥೆ ಕುಸುಮಾ ಇತರರು ಇದ್ದರು.