ಕೊನೆಗೂ ಶೌಚಗೃಹ ಸ್ವಚ್ಛ

08 SARAG 3 (1)
ಸರಗೂರು ತಾಲೂಕಿನ ಪಟ್ಟಣದ ಬಸ್ ನಿಲ್ದಾಣದಲ್ಲಿ ಪೌರಕಾರ್ಮಿಕರು ಶೌಚಗೃಹವನ್ನು ಸ್ವಚ್ಚತೆ ಮಾಡುತ್ತಿರುವ ದೃಶ್ಯ.
Published on

ಸರಗೂರು : ಪಟ್ಟಣ ಬಸ್ ನಿಲ್ದಾಣದ ಶೌಚಗೃಹದ ಅನೈರ್ಮಲ್ಯಕ್ಕೆ ಕೊನೆಗೂ ಮುಕ್ತಿ ದೊರಕಿದೆ. ಅಶುಚಿತ್ವ ತಾಂಡವವಾಡುತ್ತಿದ್ದ ಹಿನ್ನೆಲೆಯಲ್ಲಿ ವಿಜಯವಾಣಿಯಲ್ಲಿ ನ.6 ರಂದು ಪ್ರಕಟಗೊಂಡ ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತ ಪಟ್ಟಣ ಪಂಚಾಯಿತಿ ಶೌಚಗೃಹ ಸ್ವಚ್ಛಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಿರಿಸಿದೆ.

ಶೌಚಗೃಹ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಗುಂಡಿಯನ್ನು ಸ್ವಚ್ಛಗೊಳಿಸಿ ಕೊಳಚೆ ನೀರನ್ನು ಇಂಗು ಗುಂಡಿಗೆಬಿಟ್ಟು ಸ್ವಚ್ಛ ಮಾಡಲಾಯಿತು. ಇದರಿಂದ ಶೌಚಗೃಹದಿಂದ ಬರುತ್ತಿದ್ದ ದುರ್ವಾಸನೆ ಕಡಿಮೆಯಾಗಿದ್ದು, ಅಕ್ಕಪಕ್ಕದ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೆ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ಸಾರ್ವಜನಿಕರು ಶೌಚಗೃಹ ಬಳಕೆಗೆ ಮುಂದಾಗಿದ್ದಾರೆ. ಸಾರ್ವಜನಿಕ ಸಮಸ್ಯೆ ಪರಿಹಾರವಾಗಲು ಸಹಕರಿಸಿದ ವಿಜಯವಾಣಿಗೆ ಜನತೆ ಧನ್ಯವಾದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net