ಕೊನೆಗೂ 7 ಸಬ್ ರಿಜಿಸ್ಟ್ರಾರ್‌ಗಳಿಗೆ ಲಾಗಿನ್ ಐಡಿ

Untitled
Published on

ಬೆಂಗಳೂರು: ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾಖಲಿಸಿದ್ದ ರಿಟ್ ಅರ್ಜಿಯನ್ನು ವಾಪಸ್ ಪಡೆದ ಕಾರಣ 7 ನೋಂದಣಾಧಿಕಾರಿಗಳಿಗೆ ಲಾಗಿನ್ ಐಡಿ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೋಂದಣಿ ಮಹಾಪರಿವೀಕ್ಷಕರಿಗೆ ಪತ್ರ ಬರೆದಿದ್ದಾರೆ.

ಹಿರಿಯ ಉಪನೋಂದಣಾಧಿಕಾರಿಗಳಾದ ಎ.ರಾಘವೇಂದ್ರ, ಪಿ.ಬಿ.ಕವಿತಾ, ಕೆ.ಸಿ.ವಿಶ್ವನಾಥ್, ಎಚ್.ಎಸ್. ಅರವಿಂದ್, ಕೆ.ಆರ್.ರವೀಂದ್ರಗೌಡ ಹಾಗೂ ಉಪ ನೋಂದಣಾಧಿಕಾರಿರಾದ ಎಚ್. ಜಯಪ್ರಕಾಶ್, ಸಿ.ಅಂಜಲಿ ಎಂಬುವರು ವರ್ಗಾವಣೆಗೊಂಡು ಕಾರ್ಯವರದಿ ಮಾಡಿಕೊಂಡಿರುವ ಹುದ್ದೆಗಳಿಗೆ ಸಂಬಂಧಿಸಿದಂತೆ ಲಾಗಿನ್ ಐಡಿಗಳಿಗೆ ರೋಲ್ ಮ್ಯಾಪ್ ಮಾಡಲು ನಿಯಮಾನುಸಾರ ಕ್ರಮವಹಿಸುವಂತೆ ಆದೇಶದಲ್ಲಿ ನೋಂದಣಿ ಮಹಾಪರಿವೀಕ್ಷಕರಿಗೆ ಸೂಚಿಸಲಾಗಿದೆ. ಈ ಮೂಲಕ ಆರೇಳು ತಿಂಗಳ ಬಳಿಕ ಸಬ್‌ರಿಜಿಸ್ಟ್ರಾರ್‌ಗಳಿಗೆ ಲಾಗಿನ್ ಐಡಿ ಸಿಕ್ಕಿದಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net