ಜಿಲ್ಲೆಯಲ್ಲಿ 15,62,916 ಮತದಾರರು: ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾಹಿತಿ

Final voter list release meeting Mandya
Published on

ಮಂಡ್ಯ: ಜಿಲ್ಲೆಯಲ್ಲಿ ಕೈಗೊಂಡ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಭಿಯಾನದ ಅಂತಿಮ ಮತದಾರ ಪಟ್ಟಿಯನ್ನು ಜಿಲ್ಲಾಧಿಕಾರಿ, ತಾಲೂಕು ಕಚೇರಿ ಹಾಗೂ ಎಲ್ಲ ಮತಟ್ಟೆಗಳಲ್ಲಿ ಪ್ರಕಟಿಸಲಾಗುವುದು. ಅಂತೆಯೇ ಜಿಲ್ಲೆಯಲ್ಲಿ ಒಟ್ಟು 15,62,916 ಮತದಾರರಿದ್ದಾರೆ. ಈ ಪೈಕಿ 7,67,209 ಪುರುಷ, 7,95,562 ಮಹಿಳಾ ಹಾಗೂ 145 ತೃತೀಯ ಲಿಂಗ ಮತದಾರರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2025 ಜ.1 ಅನ್ನು ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮಾಡಲಾಗಿದೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂತಿಮ ಮತದಾರರ ಪಟ್ಟಿ ಹಾಗೂ ಸೇವಾ ಮತದಾರರ ಅಂತಿಮ ಪಟ್ಟಿಯನ್ನು ಪ್ರಚುರ ಪಡಿಸಲಾಗಿದೆ. ಜಿಲ್ಲೆಯ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಉಚಿತವಾಗಿ ನೀಡಲಾಗಿದೆ ಎಂದರು.

ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 1,26,747 ಪುರುಷ, 1,28,841 ಮಹಿಳಾ, 10 ತೃತೀಯ ಲಿಂಗಿ ಸೇರಿದಂತೆ ಒಟ್ಟು 2,55,598 ಮತದಾರರಿದ್ದಾರೆ. ಮದ್ದೂರಿನಲ್ಲಿ 1,04,109 ಪುರುಷ, 1,11,901 ಮಹಿಳಾ, 19 ತೃತೀಯ ಲಿಂಗಿ ಸೇರಿ ಒಟ್ಟು 2,16,029 ಮತದಾರರು, ಮೇಲುಕೋಟೆಯಲ್ಲಿ 1,00,262 ಪುರುಷ, 1,03,477 ಮಹಿಳಾ, 10 ತೃತೀಯ ಲಿಂಗಿ ಸೇರಿ ಒಟ್ಟು 2,03,749 ಮತದಾರರು, ಮಂಡ್ಯದಲ್ಲಿ 1,11,847 ಪುರುಷ, 1,18,285 ಮಹಿಳಾ, 42 ತೃತೀಯ ಲಿಂಗಿ ಸೇರಿದಂತೆ ಒಟ್ಟು 2,30,174 ಮತದಾರರಿದ್ದಾರೆ. ಅಂತೆಯೇ ಶ್ರೀರಂಗಪಟ್ಟಣದಲ್ಲಿ 1,05,868 ಪುರುಷ, 1,11,664 ಮಹಿಳಾ, 43 ತೃತೀಯ ಲಿಂಗಿ ಸೇರಿ ಒಟ್ಟು 2,17,575 ಮತದಾರರು, ನಾಗಮಂಗಲದಲ್ಲಿ 1,07,278 ಪುರುಷ, 1,08,889 ಮಹಿಳಾ, 11 ತೃತೀಯ ಲಿಂಗಿ ಸೇರಿ ಒಟ್ಟು 2,16,178 ಮತದಾರರು ಹಾಗೂ ಕೆ.ಆರ್.ಪೇಟೆ ಕ್ಷೇತ್ರದಲ್ಲಿ 1,11,098 ಪುರುಷ, 1,12,505 ಮಹಿಳಾ, 10 ತೃತೀಯ ಲಿಂಗಿ ಸೇರಿದಂತೆ ಒಟ್ಟು 2,23,613 ಮತದಾರರಿದ್ದಾರೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಒಟ್ಟು 1,823 ಮತಗಟ್ಟೆಗಳಿವೆ. ಮಳವಳ್ಳಿ ಕ್ಷೇತ್ರದಲ್ಲಿ 272 ಮತಗಟ್ಟೆ, ಮದ್ದೂರಿನಲ್ಲಿ 254, ಮೇಲುಕೋಟೆಯಲ್ಲಿ 264, ಮಂಡ್ಯದಲ್ಲಿ 263, ಶ್ರೀರಂಗಪಟ್ಟಣದಲ್ಲಿ 249, ನಾಗಮಂಗಲದಲ್ಲಿ 260, ಕೆ.ಆರ್.ಪೇಟೆ ಕ್ಷೇತ್ರದಲ್ಲಿ 261 ಮತಗಟ್ಟೆಗಳಿವೆ. ಇನ್ನು ಜಿಲ್ಲೆಯಲ್ಲಿ ಒಟ್ಟು 19,875 ಯುವ ಮತದಾರರಿದ್ದಾರೆ. ಅದರಲ್ಲಿ 10,484 ಪುರುಷ, 9,388 ಮಹಿಳಾ ಹಾಗೂ 3 ತೃತೀಯ ಲಿಂಗಿ ಮತದಾರರಿದ್ದಾರೆ. ಅಂತೆಯೇ ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ ಒಟ್ಟು 19,373 ಮತದಾರರು, 22,320 ಅಂಗವಿಕಲ ಹಾಗೂ 617 ಸೇವಾ ಮತದಾರರಿದ್ದಾರೆ ಎಂದರು.

ಸಭೆಯಲ್ಲಿ ಚುನಾವಣಾ ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ವಿವಿಧ ರಾಜಕೀಯ ಪಕ್ಷದ ಮುಖಂಡರಾದ ಬೊಮ್ಮಯ್ಯ, ದಿನೇಶ್, ಮಂಜುನಾಥ್, ರಮೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net