ಈದ್ಗಾ ಮೈದಾನದ ಗಣೇಶನಿಗೆ ಅಂತಿಮಸ್ಪರ್ಶ

15 Dwd 5
Published on

ಧಾರವಾಡ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆಗಾಗಿ ನಗರದಲ್ಲಿ ಸಿದ್ಧಗೊಳ್ಳುತ್ತಿರುವ ಶ್ರೀ ಗಣೇಶ ಮೂರ್ತಿಯನ್ನು ರಾಣಿ ಚನ್ನಮ್ಮ ಮೈದಾನ ಗಜಾನನೋತ್ಸವ ಮಹಾಮಂಡಳದವರು ಶುಕ್ರವಾರ ಸಂಜೆ ವೀಕ್ಷಿಸಿದರು.
ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ತಡೆ ಕೋರಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಗಳನ್ನು ಹೈಕೋರ್ಟ್ ಪೀಠ ತಿರಸ್ಕರಿಸಿದ ಬೆನ್ನಲ್ಲೇ ಮಹಾಮಂಡಳದ ಪದಾಽಕಾರಿಗಳು ನಗರದ ಚರಂತಿಮಠ ಗಾರ್ಡನ್‌ಗೆ ಆಗಮಿಸಿ ಮೂರ್ತಿಯನ್ನು ವೀಕ್ಷಿಸಿದರು.
ಸ್ವಾಗತ ಸಮಿತಿ ಉಪಾಧ್ಯಕ್ಷ ಗೌತಮ ಭಾಪಣಾ, ಮÁಲಾರಾದೇವಾಸಿ, ಸುಭಾಸಸಿಂಗ್ ಜಮÁದಾರ, ಜಯತೀರ್ಥ ಕಟ್ಟಿ, ಮಹೇಂದ್ರ ಕೌತಾಳ, ಸಂಜು ಬಡಸ್ಕರ, ರಮೇಶ ಕದಮ, ವಿಜಯ ಕ್ಷೀರಸಾಗರ, ಕಿಶನ ಬೆಳಗಾವಿ, ಅಕ್ಷಯ ಚುಗ್, ಪ್ರಸಾದ್ ಕರನಂದಿ, ಅಭಿಷೇಕ ಮೆಹ್ತಾ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net