ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗೆಹರಿಯುತ್ತಾ..? ಹೆಚ್ಚುತ್ತಾ..? ಅ.10 ರಂದು ಅಂತಿಮ ವಿಚಾರಣೆ

Forest encroachment
Published on

ಶಿರಸಿ: ಸುಪ್ರೀಂ ಕೊರ್ಟನಲ್ಲಿ ಪರಿಸರ ಸಂಘಟನೆಗಳು 2008 ರಲ್ಲಿ ದಾಖಲಿಸಿದ ಸಾರ್ವಜನಿಕ ಹಿತಸಕ್ತಿಯ ಅರ್ಜಿಯ ಅಂತಿಮ ವಿಚಾರಣೆ ಅಕ್ಟೋಬರ್ 10 ರಂದು ಜರುಗಲಿದೆ. ದೇಶಾದ್ಯಂತ ತಿರಸ್ಕಾರಗೊಂಡಿರುವ ಸುಮಾರು 18 ಲಕ್ಷಕ್ಕೂ ಅಧಿಕ ಅರಣ್ಯವಾಸಿಗಳ ಭೂಮಿ ಹಕ್ಕಿನ ಭವಿಷ್ಯ ಸುಪ್ರೀಂ ಕೊರ್ಟನ ಆದೇಶವು ನಿರ್ಧರಿಸಲಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅರಣ್ಯ ಭೂಮಿ ಹಕ್ಕು ಕಾನೂನಿನ ಮೌಲ್ಯತೆವನ್ನ ಪ್ರಶ್ನಿಸಿ ಹಾಗೂ ಕಾಯ್ದೆ ಅಡಿಯಲ್ಲಿ ತಿರಸ್ಕರಿಸಿದ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರದಿಂದ ಒಕ್ಕಲೆಬ್ಬಿಸಿ ಅತಿಕ್ರಮಿಸಿರುವ ಅರಣ್ಯ ಕೇತ್ರವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕೆಂಬ ದೇಶದ ಎಂಟು ಪರಿಸರ ಸಂಘಟನೆಗಳು ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸುಪ್ರೀಂ ಕೊರ್ಟನಲ್ಲಿ ಅಂತಿಮ ವಿಚಾರಣೆಗೆ ಅಕ್ಟೋಬರ್ 10 ರಂದು ನಿಗಧಿಗೊಳಿಸಲಾಗಿದೆ. ಅಂದು ಅರಣ್ಯವಾಸಿಗಳ ಪರವಾಗಿ ಹೋರಾಟಗಾರರ ವೇದಿಕೆಯು ವಾದ ಮಂಡಿಸಲಿದೆ. ಸುಪ್ರಿಂ ಕೊರ್ಟನಲ್ಲಿ ವಿಶ್ರಾಂತ ನ್ಯಾಯಮೂರ್ತಿ ಎಚ್. ಎನ್ ನಾಗಮೋಹನ್‌ದಾಸ್ ಅವರ ನೇತೃತ್ವದಲ್ಲಿ ಹಿರಿಯ ವಕೀಲ ತಂಡವು ಹೋರಾಟಗಾರರ ವೇದಿಕೆಯ ಪರವಾಗಿ ವಾದ ಮಂಡಿಸಲಿದೆ ಎಂದು ಅವರು ಹೇಳಿದರು.

ದೇಶದಲ್ಲಿ 1,855,792 ಅರಣ್ಯವಾಸಿ ಕುಟುಂಬ ಅತಂತ್ರದ ಭೀತಿ:

ದೇಶಾದ್ಯಂತ 21 ರಾಜ್ಯಗಳಲ್ಲಿ 51,04,904 ಅರ್ಜಿಗಳನ್ನ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ದಾಖಲಾಗಿವೆ. ಬಂದಿರುವAತಹ ಅರ್ಜಿಗಳಲ್ಲಿ ಈಗಾಗಲೇ 18,55,792 ಅರ್ಜಿಗಳನ್ನ ತಿರಸ್ಕರಿಸಲಾಗಿದೆ. ಅಲ್ಲದೇ, 7,45,659 ಅರ್ಜಿಗಳು ವಿಚಾರಣೆಗೆ ಬಾಕಿ ಇದೆ ಎಂಬ ಅಂಶ ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯ ಪ್ರಕಟಣೆಯಲ್ಲಿ ತಿಳಿದು ಬರುತ್ತದೆ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net